ಜಿಯೋ ಗ್ರಾಹಕರಿಗೊಂದು ಬ್ಯಾಡ್ ನ್ಯೂಸ್

ಈ ಸುದ್ದಿಯನ್ನು ಶೇರ್ ಮಾಡಿ

jiO--01

ನವದೆಹಲಿ, ಏ.6 : ಜಿಯೋ ಗ್ರಾಹಕರಿಗೊಂದು ಬ್ಯಾಡ್ ನ್ಯೂಸ್ ಇಲ್ಲಿದೆ. ಸಮ್ಮರ್ ಸರ್‍ಪ್ರೈಸ್ ಆಫರ್ ಹೆಸರಿನಲ್ಲಿ ಹೊಸ ಆಫರ್ ಘೋಷಿಸಿದ್ದ ಜಿಯೋ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸಲಹೆಯ ಹಿನ್ನೆಲೆಯಲ್ಲಿ ಈ ಆಫರ್ ಅನ್ನು ಹಿಂದಕ್ಕೆ ಪಡೆದುಕೊಂಡಿದೆ.  ಕಳೆದ ತಿಂಗಳ 31ರಂದು ಜಿಯೋ ಸಮ್ಮರ್ ಆಫರ್ ಘೋಷಿಸಿದ್ದ ಜಿಯೋ ಸಂಸ್ಥೆ, ತನ್ನಲ್ಲಿ ಪ್ರೈಮ್ ಸದಸ್ಯತ್ವ ಪಡೆದ ತನ್ನ ಗ್ರಾಹಕರು 303 ರು. ಗಳಿಗೆ ರೀಚಾರ್ಜ್ ಮಾಡಿಸಿದರೆ ಸಾಕು ಅವರು ಮೂರು ತಿಂಗಳ ಕಾಲ ಉಚಿತವಾಗಿ ಕರೆ ಹಾಗೂ ಡೇಟಾ ಸೌಕರ್ಯ ಪಡೆಯಬಹುದಾಗಿತ್ತು.

ಆದರೆ, ಈ ಸೌಲಭ್ಯವನ್ನು ಜಿಯೋ ಹಿಂಪಡೆದಿದ್ದು, 303 ಹಾಗೂ ಅದಕ್ಕಿಂತ ಹೆಚ್ಚು ರು.ಗಳ ರೀಚಾರ್ಜ್ ಮಾಡಿಸುವವರು, ಇತರ ನೆಟ್ ವರ್ಕ್ ಗಳಂತೆ ಕೇವಲ 30 ದಿನಗಳಿಗೆ ಮಾತ್ರ ಜಿಯೋ ಸೌಲಭ್ಯ ಪಡೆಯಲಿದ್ದಾರೆ.  ಆದರೆ, ಪ್ರೈಮ್ ಸದಸ್ಯತ್ವ ಪಡೆದು 303 ಹಾಗೂ ಅದಕ್ಕಿಂತ ಮೇಲ್ಪಟ್ಟ ದರಗಳಲ್ಲಿ ರೀಚಾರ್ಜ್ ಮಾಡಿಸಿ ಸಮ್ಮರ್ ಆಫರ್ ನಲ್ಲಿ ನೋಂದಾಯಿಸಿಕೊಂಡಿದ್ದ ಗ್ರಾಹಕರಿಗೆ ಈ ಮೊದಲು ಘೋಷಿಸಿದ್ದಂತೆ 3 ತಿಂಗಳ ಉಚಿತ ಡೇಟಾ, ಕರೆ ಆಫರ್ ಮುಂದುವರಿಯಲಿದೆ.

ಇತ್ತೀಚೆಗೆ, ಆ ಕಂಪನಿಯು ಬಿಡುಗಡೆಗೊಳಿಸಿದ್ದ ಜಿಯೋ ಸಮ್ಮರ್ ಆಫರ್ ಅನ್ನು ಬದಲಿಸಿಕೊಳ್ಳುವಂತೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಆದೇಶಿದ್ದು, ಈ ಹಿನ್ನೆಲೆಯಲ್ಲಿ ತನ್ನ ಸಮ್ಮರ್ ಆಫರ್ ನಲ್ಲಿ ಕೆಲ ಬದಲಾವಣೆಗಳನ್ನು ಅದು ಮಾಡಿಕೊಂಡಿದೆ.

ಜಿಯೋದ ಮೇಲೆ ಟ್ರಾಯ್ ನಿಮಯ ಉಲ್ಲಂಘನೆ ಆರೋಪ ಬರುವುದು ಇದೆ ಮೊದಲೆನಲ್ಲ. ಆರಂಭದಲ್ಲಿ ವೆಲಕಂ ಆಫರ್ ಪ್ರಕಟಿಸಿದಾಗಲೇ ಏರ್‍ಟೆಲ್, ಐಡಿಯಾ, ವೊಡಾಫೋನ್ ಕಂಪೆನಿಗಳು ಟ್ರಾಯ್‍ಗೆ ದೂರು ನೀಡಿದ್ದವು. ಆದರೆ 90 ದಿನಗಳ ಉಚಿತ ಸೇವೆ ತನ್ನ ನಿಯಮದ ಅಡಿಯಲ್ಲೇ ಇದೆ. ಕಂಪೆನಿ ತನ್ನ ಪ್ರಚಾರಕ್ಕಾಗಿ ಈ ರೀತಿಯ ಉಚಿತ ಸೇವೆಯನ್ನು ನೀಡಲು ಅವಕಾಶವಿದೆ ಎಂದು ಹೇಳಿ ಟ್ರಾಯ್ ಟೆಲಿಕಾಂ ಕಂಪೆನಿಗಳ ಆರೋಪವನ್ನು ತಿರಸ್ಕರಿಸಿತ್ತು. ಆದರೆ ಇದಾದ ಬಳಿಕ ಜಿಯೋ ಹ್ಯಾಪಿ ನ್ಯೂ ಇಯರ್ ಪ್ಲಾನ್ ನೀಡಿತ್ತು. ಇದರಲ್ಲಿ ಒಂದು ದಿನ ಗರಿಷ್ಟ 1 ಜಿಬಿ ಡೇಟಾ ಬಳಕೆ ಮಾಡಬಹುದಾಗಿತ್ತು. ಮಾರ್ಚ್ 31ಕ್ಕೆ ಈ ಅವಧಿ ಮುಕ್ತಾಯವಾದ ಬಳಿಕ ಜಿಯೋ ಸಮ್ಮರ್ ಸರ್‍ಪ್ರೈಸ್ ಆಫರ್ ಪ್ರಕಟಿಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin