ಜಿಲ್ಲಾ ಬೀದಿ ವ್ಯಾಪಾರಸ್ಥರ ಸಾಮಾನ್ಯ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

16
ಗದಗ,ಮಾ.15- ಜಿಲ್ಲಾ ಬೀದಿ ವ್ಯಾಪಾರಸ್ಥರ ಸಾಮಾನ್ಯ ಸಭೆ ನಗರದ ಪಾಲಾ ಬದಾಮಿ ರಸ್ತೆಗೆ ಹೊಂದಿರುವ ಗುರುಭವನದಲ್ಲಿ ಜರುಗಿತು.ಶಹರ ಘಟಕದ ಅಧ್ಯಕ್ಷರು ಮಾತನಾಡಿ ಬೀದಿ ವ್ಯಾಪಾರಸ್ಥರು ಸಂಘಟಿತರಾಗಲು ಕರೆ ನೀಡಿ, ರಾಷ್ಟ್ರೀಯ ಜೀವನೋಪಾಯದಡಿ ಪ್ರತಿಯೊಂದು ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳು ಮಂಜೂರು ಮಾಡುವಂತೆ ಜನಪ್ರತಿನಿಧಿಗಳಿಗೆ ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ. ಕಾರಣ ವ್ಯಾಪಾರಸ್ಥರು ಸಂಘದ ನೀತಿ ನಿಯಮಗಳ ಪಾಲಿಸಿ ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ಬಾಷಾಸಾಬ ಮಲಸಮುದ್ರ ಮಾತನಾಡಿ ಬೀದಿ ವ್ಯಾಪಾರಸ್ಥರು ಇಡೀ ದೇಶದಲ್ಲಿದ್ದು, 2013-14ರಲ್ಲಿ ಸರ್ವೋಚ್ಛ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದ್ದು ಬೀದಿ ವ್ಯಾಪಾರಸ್ಥರ ಹಕ್ಕುಗಳ ಹಾಗೂ ಬೇಡಿಕೆಗಳನ್ನು ಪುರಸ್ಕರಿಸಿ ದೇಶದ ಎಲ್ಲ ರಾಜ್ಯಗಳಿಗೆ ಆದೇಶ ಸೂಚಿಸಿದ್ದು ಮುಂಬರುವ ದಿನಗಳಲ್ಲಿ ನಗರಸಭೆಯ ವತಿಯಿಂದ ಸಂಘಕ್ಕೆ ಅನುದಾನ ಹಾಗೂ ಯೋಜನೆಗಳ ರೂಪಿಸಿ ಅನುದಾನ ಮಂಜೂರು ಮಾಡುವಂತೆ ಪೌರಾಯುಕ್ತರಿಗೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನಜೀರ ಅಹ್ಮದ ಖವಸ, ದಾವಲ ಬೆಟಗೇರಿ, ಸಲೀಂ ಬಳ್ಳಾರಿ, ಮುಸ್ತಾಪ ಹುಬ್ಬಳ್ಳಿ, ಮಹಬೂಬ ಧಾರವಾಡ, ಬಾಬುಲಾಲ ಸವಣೂರ, ಅಮೀನ ಧಾರವಾಡ, ಮಕ್ತುಮ ನಾಲಬಂದ,  ಮಹಮ್ಮದಅಲಿ ಅತ್ತಾರ, ಶಿವಾಜಿ ಮಧುರಕರ, ಮುಸ್ತಾಕ ಢಾಲಾಯತ, ಇಮಾಮಹುಸೇನ ಢಾಲಾಯತ, ರಮೇಶ ಮೇಟಿ, ಇನ್ನೂ ಹಲವಾರು ಮಹಿಳಾ ಕಾರ್ಯಕರ್ತರು ಹಾಗೂ ಯುವಕರು ಹಾಗೂ ಸುಮಾರು 400ಕ್ಕೂ ಹೆಚ್ಚು ಕಾರ್ಯಕರ್ತರು ಸಾಮಾನ್ಯ ಸಭೆಯಲ್ಲಿ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin