ಜಿ-20 ಶೃಂಗಸಭೆ ಫಲಶೃತಿಯ ಬಗ್ಗೆ ಪ್ರಧಾನಿ ಮೋದಿ ವಿಶ್ವಾಸ

ಈ ಸುದ್ದಿಯನ್ನು ಶೇರ್ ಮಾಡಿ

modi

ನವದೆಹಲಿ, ಸೆ.2-ಚೀನಾದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯು ಉತ್ಪಾದಕತೆ ಮತ್ತು ಫಲಶೃತಿಗೆ ಅತ್ಯಂತ ಪೂರವಾಗಿರುತ್ತದೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ. ಚೀನಾದ ಹಾಂಗ್‌ಝೌಗ್‌ನಲ್ಲಿ ಭಾನುವಾರದಿಂದ ಆರಂಭವಾಗುವ ಜಿ20 ಶೃಂಗಸಭೆಯಲ್ಲಿ ಅಂತರರಾಷ್ಟ್ರೀಯ ಆದ್ಯತೆಗಳು ಮತ್ತು ಸವಾಲುಗಳ ಮೇಲೆ ಭಾರತವು ಬೆಳಕು ಚೆಲ್ಲಲಿದೆ. ಈ ನಿಟ್ಟಿನಲ್ಲಿ ಸಭೆಯು ಉತ್ಪಾದಕತೆ ಮತ್ತು ಫಲಶೃತಿಗೆ ತುಂಬಾ ಪೂರಕವಾಗಿರುತ್ತದೆ ಎಂಬುದನ್ನು ತಾವು ಎದುರು ನೋಡುವುದಾಗಿಯೂ ಮೋದಿ ಹೇಳಿದ್ದಾರೆ.

ಇಂದು ಸಂಜೆ ನಾನು ವಿಯೆಟ್ನಾಂ ರಾಜಧಾನಿ ಹನೊಯ್‌ನನ್ನು ತಲುಪುತ್ತೇನೆ. ಇದು ಬಹು ಮುಖ್ಯ ಭೇಟಿಯಾಗಲಿದೆ. ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ಬಲವರ್ಧನೆಯಲ್ಲಿ ಈ ಭೇಟಿಯು ಮಹತ್ವದ್ದಾಗಲಿದೆ. ಉಭಯ ರಾಷ್ಟ್ರಗಳ ಬಾಂಧವ್ಯದಿಂದ ಏಷ್ಯಾ ಖಂಡಕ್ಕೂ ಅನುಕೂಲವಾಗಲಿದೆ ಎಂದು ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ವಿಯೆಟ್ನಾಂ ಭೇಟಿ ನಂತರ ಪ್ರಧಾನಿ ಅವರು ನಾಳೆ ಚೀನಾದತ್ತ ಪ್ರಯಾಣ ಬೆಳೆಸಿ ಸೆ.4ರಂದು ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin