ಜೀವಾವಧಿ ಶಿಕ್ಷೆಗೊಳಗಾಗಿದ್ದ 284 ಸನ್ನಡತೆ ಖೈದಿಗಳ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Relesed

ಬೆಂಗಳೂರು, ಆ.15-ರಾಜ್ಯದ ವಿವಿಧ ಬಂಧಿಖಾನೆಗಳಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ 284 ಸನ್ನಡತೆ ಖೈದಿಗಳನ್ನು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಇಂದು ಬಿಡುಗಡೆ ಮಾಡಲಾಯಿತು.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ 120 ಕೈದಿಗಳು, ಮೈಸೂರು ಜೈಲಿನಿಂದ 52, ಬಳ್ಳಾರಿಯಿಂದ 20, ಧಾರವಾಡದಿಂದ 8, ವಿಜಯಪುರದಿಂದ 16, ಬೆಳಗಾವಿಯಿಂದ 35 ಮತ್ತು ಗುಲ್ಬರ್ಗಾ 27 ಕೈದಿಗಳು ಸೇರಿದಂತೆ ಒಟ್ಟು 284 ಕೈದಿಗಳನ್ನು ಇಂದು ಬಿಡುಗಡೆ ಮಾಡಲಾಯಿತು. ಸನ್ನಡತೆ ಆಧಾರದ ಮೇಲೆ ಕೈದಿಗಳ ಬಿಡುಗಡೆ ಮಾಡುವ ಸಂಬಂಧ ಇತ್ತೀಚೆಗÉ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. 14 ವರ್ಷ ಶಿಕ್ಷೆ ಪೂರೈಸಿದ ಪುರುಷರು ಹಾಗೂ 10 ವರ್ಷ ಶಿಕ್ಷೆ ಪೂರೈಸಿದ ಮಹಿಳೆಯರನ್ನು ಬಿಡುಗಡೆ ಮಾಡುವ ಸಂಬಂಧ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿದ್ದು, ರಾಜ್ಯಸರ್ಕಾರ ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನು ರೂಪಿಸಿ ಕೈದಿಗಳ ಬಿಡುಗಡೆ ಮಾಡಲು ನಿರ್ಧರಿಸಿತ್ತು.

ಇಂದು ಸಂಜೆ 4 ಗಂಟೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಸಮ್ಮುಖದಲ್ಲಿ ನಗರದ ಕೇಂದ್ರ ಕಾರಾಗೃಹದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಕೈದಿಗಳನ್ನು ಬಿಡುಗಡೆ ಮಾಡಲಾಯಿತು.  ಇನ್ನುಳಿದಂತೆ ಎಲ್ಲಾ ಕಡೆ ಸನ್ನಡತೆ ಕೈದಿಗಳನ್ನು ಬಿಡುಗಡೆ ಮಾಡಲಾಯಿತು.

► Follow us on –  Facebook / Twitter  / Google+

Facebook Comments

Sri Raghav

Admin