ಜೀ ಕನ್ನಡ ಕುಟುಂಬ ಅವಾರ್ಡ್ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

JI

ಜೀ ಕನ್ನಡ ವಾಹಿನಿ ಟಿವಿ ಪರದೆಯ ಮೇಲೆ ಮಿಂಚುವ ತಾರೆಗಳನ್ನು ಒಂದೆಡೆ  ಸೇರಿಸಿತ್ತು. ಸದಾ ನವನವೀನ ಕಾರ್ಯಕ್ರಮಗಳನ್ನು ಕನ್ನಡಿಗರ ಮುಂದಿಡುತ್ತಾ, ಮನರಂಜನೆಯ ಪ್ಯಾಕೇಜ್ ಹೊತ್ತು ತರುತ್ತಿರುವ ಎಲ್ಲಾ ಕಾರ್ಯಕ್ರಮಗಳ ಬಳಗಕ್ಕೆ ಪ್ರಶಸ್ತಿ ನೀಡಿ ವಂದಿಸಲು ಮುಂದಾಗಿತ್ತು. ಜೀ ಕನ್ನಡ ಕುಟುಂಬ ಅವಾರ್ಡ್‍ಗೆ ಕೋರಮಂಗಲದ ಒಳಾಂಗಣ ಕ್ರೀಡಾಂಗಣ ಸಾಕ್ಷಿಯಾಗಿ ಕಂಡು ಬಂತು. ವೀಕ್ಷಕರ ಮನ ಗೆದ್ದ ಜೀ ಕನ್ನಡ ವಾಹಿನಿಯ ಎಲ್ಲಾ ತಾರೆಗಳು ಕಾರ್ಯಕ್ರಮಕ್ಕೆ ಮೆರಗು ನೀಡಿದ್ದರೆ, ಆ ಸಂತಸದೊಟ್ಟಿಗೆ ಜೊತೆಯಾಗಲು ಕನ್ನಡ ಚಿತ್ರರಂಗದ ತಾರಾ ಬಳಗವೇ ಆಗಮಿಸಿತ್ತು.

ಚಾಲೆಂಜಿಂಗ್ ಸ್ಟಾರ್ ದರ್ಶನ್, ನವರಸ ನಾಯಕ ಜಗ್ಗೇಶ್, ರಮೇಶ್ ಅರವಿಂದ್, ರಚಿತಾರಾಮ್. ಗುರುಕಿರಣ್, ಮಾಲಾಶ್ರೀ, ಶೃತಿ ಹರಿಹರನ್, ಶರ್ಮಿಳಾ ಮಾಂಡ್ರೆ, ಹರ್ಷಿಕಾ ಪೂಣಚ್ಚ ಮುಂತಾದತಾರಾ ಮೆರುಗು ಈ ಸುಂದರ ಕಾರ್ಯಕ್ರಮದಲ್ಲಿತ್ತು. ಪ್ರಖ್ಯಾತ ನೃತ್ಯಪಟು ಪ್ರಭುದೇವನ್ ತಂದೆ ಸುಂದರಂ ಮಾಸ್ಟರ್ ಈ ವಯಸ್ಸಿನಲ್ಲೂ ಅದ್ಭುತ ನೃತ್ಯ ಪ್ರದರ್ಶನ ನೀಡಿದರೆ, ಮಾಲಾಶ್ರೀ , ಶೃತಿ ಹರಿಹರನ್, ಶರ್ಮಿಳಾ ಮಾಂಡ್ರೆ ಮತ್ತು ವಾಹಿನಿ ಎಲ್ಲಾತಾರಾ ಬಳಗ ಹೆಜ್ಜೆ ಹಾಕಿ ಇಡೀ ಸಭಿಕರನ್ನು ರಂಜಿಸಿತು.

ವೇದಿಕೆಯ ಮೇಲೆ ಚಾಲೆಂಜಿಂಗ್ ಸ್ಟಾರ್‍ದರ್ಶನ್ ಮತ್ತು ರಮೇಶ್ ಅರವಿಂದರ ಮಾತುಕತೆಗೆ ಇಡೀ ಸಭಾಂಗಣವೇ ಮೆಚ್ಚುಗೆ ಸೂಚಿಸಿತು. ಕರ್ನಾಟಕದ ಸ್ಟಾರ್ ಪುಟಾಣಿಗಳಾದ ಡ್ರಾಮಾ ಜ್ಯುನಿಯರ್ಸ್ ಮಕ್ಕಳ ಜೊತೆಗೂಡಿ ವಿಜಯ್ ರಾಘವೇಂದ್ರ ಮತ್ತು ಮಾಸ್ಟರ್ ಆನಂದ್ ಲವಲವಿಕೆಯ ಸಮಾರಂಭದ ಸಾರಥ್ಯ ವಹಿಸಿದ್ದು ವಿಶೇಷ. ಸುಂದರ ಸಮಾರಂಭದಲ್ಲಿತೆರೆಯ ಮೇಲಿನ ಕಲಾವಿದರೊಟ್ಟಿಗೆ ತೆರೆಮರೆಯ ತಾರೆಗಳನ್ನೂ ವೇದಿಕೆ ಏರಿಸಿ ನಮಿಸಿದ್ದು ಈ ಕಾರ್ಯಕ್ರಮದ ವಿಶೇಷ. ರಂಗು ರಂಗಿನ ಈ ಸಮಾರಂಭವನ್ನು ವೀಕ್ಷಿಸುವ ಸಂತಸವನ್ನು ವೀಕ್ಷಕರಿಗೆ ನೀಡುತ್ತಿರುವ ಜೀ ವಾಹಿನಿ ಇದೇ ಶನಿವಾರ ಮತ್ತು ಭಾನುವಾರ ಸಂಜೆ 7ಕ್ಕೆ ಪ್ರಸಾರ ಮಾಡಲಿದೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin