ಜುಲೈ 1ರಿಂದ ಜಾರಿಗೊಳ್ಳಲಿರುವ ಜಿಎಸ್‍ಟಿಯಿಂದ ಶೇ.8ರಷ್ಟು ಬೆಳವಣಿಗೆ ವೃದ್ಧಿ : ಐಎಂಎಫ್

ಈ ಸುದ್ದಿಯನ್ನು ಶೇರ್ ಮಾಡಿ

GST--011

ವಾಷಿಂಗ್ಟನ್, ಏ.28-ಭಾರತದಲ್ಲಿ ಜುಲೈ 1ರಿಂದ ಜಾರಿಗೊಳ್ಳಲಿರುವ ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟಿ) ಪದ್ದತಿಯಿಂದ ಶೇ.8ಕ್ಕಿಂತ ಹೆಚ್ಚು ಮಧ್ಯಾವಧಿ ಬೆಳವಣಿಗೆ ಸಾಧಿಸಲು ಸಾಧ್ಯವಾಗಲಿದೆ ಎಮದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ. ಜಿಎಸ್‍ಟಿ ಅನುಷ್ಠಾನದಿಂದ ಭವಿಷ್ಯದಲ್ಲೂ ಭಾರತದಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ ಕಂಡುಬರಲಿದೆ ಎಂದು ಐಎಂಎಫ್‍ನ ಉಪ ವ್ಯವಸ್ಥಾಪಕ ನಿರ್ದೇಶಕ ಟಾವೋ ಝಾಂಗ್ ವಿಶೇಷ ಸಂದರ್ಶನವೊಂದಲ್ಲಿ ತಿಳಿಸಿದ್ದಾರೆ.

ಭಾರತ ಸರ್ಕಾರವು ಬಹು ಮುಖ್ಯ ಆರ್ಥಿಕ ಸುಧಾರಣೆಗಳತ್ತ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಈ ನಿಟ್ಟಿನಲ್ಲಿ ಜಿಎಸ್‍ಟಿ ಜಾರಿ ಕೂಡ ಒಂದು ದಿಟ್ಟ ಹೆಜ್ಜೆಯಾಗಿದೆ ಎಂದು ಅವರು ವಿವರಿಸಿದ್ದಾರೆ.   ಭಾರತ-ಚೀನಾ ಸದೃಢ ಬಾಂಧವ್ಯವು ವಿಶ್ವದ ಒಳಿತಿಗೆ ಬಹು ಮುಖ್ಯವಾಗಿದೆ ಎಂದು ಬಣ್ಣಿಸಿದ ಟಾವೋ, ಉಭಯ ದೇಶಗಳು ಪ್ರಸ್ತುತ ಜಾಗತಿಕ ಪ್ರಗತಿಯಲ್ಲಿ ಅರ್ಧದಷ್ಟು ಕೊಡುಗೆ ನೀಡುತ್ತಿವೆ. ಇವುಗಳ ಉತ್ತಮ ಸಂಬಂಧದಿಂದ ಏಷ್ಯಾಗೆ ಮಾತ್ರವಲ್ಲದೇ ಜಗತ್ತಿಗೂ ಒಳಿತಾಗಲಿದೆ ಎಂದು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin