ಜೂಜಾಡುತ್ತಿದ್ದ 7 ಮಂದಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

arrest

ಕಡೂರು, ಆ.23-ತಾಲೂಕಿನ ಬೀರನಹಳ್ಳಿ ಗ್ರಾಮದ ಪಂಪ್‍ಹೌಸ್ ಬಳಿ ಜೂಜಡುತ್ತಿದ್ದ ಏಳು ಮಂದಿಯನ್ನು ಬಂಧಿಸಿ ಪಣಕ್ಕಿಟ್ಟಿದ್ದ 35,100ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಖಚಿತ ಮಾಹಿತಿ ಮೇರೆಗೆ ಉಪ ನಿರೀಕ್ಷಕ ರಾಕೇಶ್, ಸಿಬ್ಬಂದಿಗಳಾದ ಗಿರೀಶ್, ರವಿ, ಚಿದಾನಂದ್, ಮಧುಕುಮಾರ್ ಅವರನ್ನೊಳಗೊಂಡ ತಂಡ ದಾಳಿ ನಡೆಸಿ ಮೂರ್ತಿಹಾಳ್‍ನ ನಾಗರಾಜ, ಮತಿಘಟ್ಟದ ಆನಂದ್, ಬೀರನಹಳ್ಳಿ ತಾಂಡ್ಯದ ಗಿರೀಶ್‍ನಾಯ್ಕ್, ರಂಗನಾಥನಾಯ್ಕ್, ಸೋಮಾನಾಯ್ಕ್, ಕೆರೆಸಂತೆಯ ದೇವರಾಜನಾಯ್ಕ್, ಕಲ್ಲಗಟ್ಟೆಯ ಹನುಮಂತಪ್ಪ ಅವರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

► Follow us on –  Facebook / Twitter  / Google+

Facebook Comments

Sri Raghav

Admin