ಜೆಎನ್‌ಯು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

jnu
ನವದೆಹಲಿ, ಆ.28-ನಿಯಮಗಳ ಉಲ್ಲಂಘನೆಗಾಗಿ ಕಳೆದ ಆರೂವರೆ ವರ್ಷ ಗಳಿಂದ ಪ್ರತಿ ತಿಂಗಳು ಸರಾಸರಿ ಏಳು ವಿದ್ಯಾರ್ಥಿಗಳ ವಿರುದ್ಧ ಜವಹರ್‌ಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಅಕಾರಿಗಳು ಕ್ರಮ ಜರುಗಿಸಿದ್ದಾರೆ. ಆರ್‌ಟಿಐ ಪ್ರಶ್ನೆಯೊಂದರಿಂದ ಈ ಸಂಗತಿ ಬೆಳಕಿಗೆ ಬಂದಿದೆ. ಈ ಮಧ್ಯೆ ಸಂಶೋಧನೆ ವಿಭಾಗದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಓರ್ವ ಪಿಎಚ್‌ಡಿ ಸ್ಕಾಲರ್‌ನನ್ನು ಜೆಎನ್‌ಯು ಅಮಾನತುಗೊಳಿಸಿದೆ.

ಕಳೆದ 2010ರಿಂದ 2016ರ ಜೂನ್ ತಿಂಗಳವರೆಗೆ ಪ್ರತಿತಿಂಗಳು ಸರಾಸರಿ ಏಳು ವಿದ್ಯಾರ್ಥಿಗಳ ವಿರುದ್ಧ ಜೆಎನ್‌ಯು ಶಿಸ್ತುಕ್ರಮ ಜರುಗಿಸಿದೆ. ಅಮಲೇರಿಸುವ ವಸ್ತುಗಳ ಸೇವನೆ. ನಿಗದಿತ ಅವ ನಂತರವೂ ವಸತಿ ನಿಲಯಗಳ ಕೊಠಡಿಗಳನ್ನು ತೆರವುಗೊಳಿಸದಿರುವಿಕೆ, ದಾಂಧಲೆ ನಡೆಸುವಿಕೆ, ಸಹ ವಿದ್ಯಾರ್ಥಿಗಳೊಂದಿಗೆ ಹೊಡೆದಾಟ, ಬ್ಲಾಕ್‌ಮೇಲ್, ಅವಾಚ್ಯ ಶಬ್ಧಗಳ ಬಳಕೆ ಇತ್ಯಾದಿಯಂಥ ಉಲ್ಲಂಘನೆಗಳ ಸಂಬಂಧ ವಿದ್ಯಾರ್ಥಿಗಳ ವಿರುದ್ಧ ಕ್ರಮಗಳನ್ನು ಕೈಗೊಂಡು ಜುಲ್ಮಾನೆ ವಿಸಲಾಗಿದೆ.

ದೆಹಲಿ ಮೂಲಕ ಕಾರ್ಯಕರ್ತ ಗೋಪಾಲ್ ಪ್ರಸಾದ್ ಅವರು ಸಲ್ಲಿಸಿದ್ದ ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಗೆ ಉತ್ತರಿಸಿರುವ ವಿಶ್ವವಿದ್ಯಾಲಯದ ಕೇಂದ್ರ ಸಾರ್ವಜನಿಕ ಸಂಪರ್ಕಾಕಾರಿ ಈ ವಿವರ ಒದಗಿಸಿದ್ದಾರೆ. ಈ ಅವಯಲ್ಲಿ ಒಟ್ಟು 537 ದೂರಗಳ ಬಗ್ಗೆ ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆ.20ರಂದು 28 ವರ್ಷ ಸಂಶೋಧನೆ ವಿಭಾಗದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪಿಎಚ್‌ಡಿ ಸ್ಕಾಲರ್‌ನನ್ನು ಅನ್ಮೋಲ್ ರತನ್‌ನನ್ನು ಜೆಎನ್‌ಯು ಅಮಾನತುಗೊಳಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin