ಜೆಟ್ ಏರ್‍ವೇಸ್ ವಿಮಾನದಲ್ಲಿ ಗಗನಸಖಿಯರಿಗೆ ಲೈಂಗಿಕ ಕಿರುಕುಳ ನೀಡಿದ ಕುಡುಕ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Jet-Airways

ನಾಗ್ಪುರ, ಫೆ.27-ಗಗನಸಖಿಯರೊಂದಿಗೆ ಪ್ರಯಾಣಿಕರು ಅಸಭ್ವಯಾಗಿ ವರ್ತಿಸುವ ಪ್ರಕರಣಗಳು ಮುಂದುವರಿದಿವೆ. ಪಾನಮತ್ತ ಯುವಕನೊಬ್ಬ ಇಬ್ಬರು ಗಗನಸಖಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಜೆಟ್ ಏರ್‍ವೇಸ್ ವಿಮಾನದಲ್ಲಿ ನಡೆದಿದ್ದು, ಆಕಾಶ್ ಗುಪ್ತ ಎಂಬಾತನನ್ನು ಬಂಧಿಸಲಾಗಿದೆ.   ಮುಂಬೈನಿಂದ ನಾಗ್ಪುರಕ್ಕೆ ಹೋಗುತ್ತಿದ್ದ ಜೆಟ್ ಏರ್‍ವೇಸ್ ಫ್ಲೈಟ್ ನಂ.9ಎಸ್24460 ವಿಮಾನದ ಸೀಟ್ ನಂ.41ಇರಲ್ಲಿ ಕುಳಿತು ಪ್ರಯಾಣಿಸುತ್ತಿದ್ದ 23 ವರ್ಷದ ಹಾರ್ಡ್‍ವೇರ್ ವ್ಯಾಪಾರಿ ಪಾನಮತ್ತನಾಗಿ ಗಗನಸಖಿಯರಿಗೆ ಲೈಂಗಿಕ ಕಿರುಕುಳ ನೀಡಿದ. ಈ ಸಂಬಂಧ ಏರ್ ಹೋಸ್ಟೆಸ್‍ಗಳು ವಿಮಾನದ ಕ್ಯಾಪ್ಟನ್‍ಗೆ ಲಿಖತ ದೂರು ನೀಡಿದರು. ಕ್ಯಾಪ್ಟನ್ ಗೋಪಾಲ್‍ಸಿಂಗ್ ಮೋಹನ್ ಸಿಂಗ್ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್‍ಎಫ್) ದೂರು ನೀಡಿದರು. ಮಧ್ಯ ಪ್ರದೇಶದ ಬಾಲಘಾಟ್ ನಿವಾಸಿ ಗುಪ್ತನನ್ನು ಬಂಧಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin