‘ಜೆಡಿಎಸ್ ಅಧಿಕಾರಕ್ಕೆ ಬರಬೇಕು, ಕುಮಾರಸ್ವಾಮಿ ಸಿಎಂ ಆಗಬೇಕು’

ಈ ಸುದ್ದಿಯನ್ನು ಶೇರ್ ಮಾಡಿ

JDS-x-0011

ಹುಣಸೂರು, ಜೂ.30- ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ನನಗೆ ನನ್ನ ಮಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂಬ ವ್ಯಾಮೋಹವಿಲ್ಲ. ನನ್ನ ಬದುಕಿನ ಕೊನೆಯ ಅವಧಿಯಲ್ಲಿ ಅನ್ನದಾತರಾಗಿರುವ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಇದು ನನ್ನ ಬಹುದಿನದ ಕನಸು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಭಿಪ್ರಾಯಪಟ್ಟರು.  ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನಾಡಿನ ರೈತರ ಹಿತಕಾಯುವ ಪಕ್ಷ ಅಂತ ಏನಾದರು ಇದ್ದರೆ ಅದು ಜೆಡಿಎಸ್ ಮಾತ್ರ. ಆದ್ದರಿಂದ ಹಳೇ ಮೈಸೂರು ಪ್ರಾಂತ್ಯದಲ್ಲಿ ಅತೀ ಎಚ್ಚು ಸೀಟುಗಳನ್ನು ಗೆಲ್ಲಿಸಿಕೊಡಬೇಕು ಹಾಗೆ ಜಿಲ್ಲೆಯಲ್ಲಿ 9 ಸ್ಥಾನವನ್ನಾದರು ತಂದು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಅಳಿಯದಂತೆ ಉಳಿಸುವ ಪ್ರಯತ್ನ ಪ್ರತಿ ಕಾರ್ಯಕರ್ತನಿಂದಾಗಬೇಕು ಎಂದು ಕರೆ ನೀಡಿದರು.

ಇಡೀ ರಾಜ್ಯವನ್ನು ಈ ಇಳಿವಯಸ್ಸಿನಲ್ಲೂ ಸುತ್ತಿ, ನಾಡಿನಗಲಕ್ಕೂ ಕಾರ್ಯಕರ್ತರು ಹಾಗೂ ಎಲ್ಲ ಸಮಾಜವನ್ನು ಒಗ್ಗೂಡಿಸುವ ಕೆಲಸಮಾಡಿಲಿದ್ದೇನೆ ನನಗೆ ಹೋರಾಟ ಹೊಸತೇನಲ್ಲ ದಿ.ದೇವರಾಜ ಅರಸರ ಕಾಲದಲ್ಲೂ ರಾಜಿಯಿಲ್ಲದೆ ಹೋರಾಟಮಾಡಿದ್ದೇನೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದರು.
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ನೊಂದವರ ಬಾಳಿಗೆ ಬೆಳಕಾಗದೆ ದುರ್ಬಲಗೊಂಡಿದೆ. ಒಂದು ಜಾತಿಯಿಂದ ಈ ರಾಜ್ಯದಲ್ಲಿ ಯಾರೂ ಕೂಡ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಒಬ್ಬ ವ್ಯೆಕ್ತಿಯಷ್ಟೆ. ಒಂದು ಶಕ್ತಿಯಲ್ಲ, ಅಂದು ನಮ್ಮ ಪಕ್ಷ ಅವರನ್ನು ಬೆಳಸಿದ್ದಕ್ಕೆ ಇಂದು ಅವರು ಮುಖ್ಯಮಂತ್ರಿಯಾಗಿದ್ದಾರೆ ಎಂದು ಹೇಳಿದರು.

ಹುಣಸೂರಿನಿಂದ ಮುಂದಿನ ಚುನಾವಣೆಯಲ್ಲಿ ಜಿ.ಡಿ.ಹರೀಶ್ ಗೌಡರಿಗೆ ಟಿಕೆಟ್ ನೀಡಬೇಕು ಎಂಬ ಕಾರ್ಯಕರ್ತರ ಕೂಗಿಗೆ ಪ್ರತಿಕ್ರಿಯಿಸಿದ ಅವರು, ಹರೀಶ್ ಚಿಕ್ಕವನಾಗಿದ್ದರು ಬುದ್ದಿಯಲ್ಲಿ ಪ್ರಭುದ್ದನಾಗಿದ್ದಾನೆ. ಆದ್ದರಿಂದ ಹುಣಸೂರು ತಾಲೂಕಿನ ಚುನಾವಣೆ ಹೊಣೆಯನ್ನು ಹರೀಶ್‍ಗೆ ವಹಿಸುವುದಾಗಿ ತಿಳಿಸಿದರು.
ಶಾಸಕ ಜಿಟಿ ದೇವೇಗೌಡ ಮಾತನಾಡಿ, ರಾಜ್ಯದಲ್ಲಿ ಯಾವುದೇ ರೈತ ಕಷ್ಟದಲ್ಲಿದ್ದಾನೆ ಎಂದರೆ ಸರಿರಾತ್ರಿಯಾದರು ಕೂಡಲೇ ಸ್ವಂದಿಸುವ ರಾಜಕೀಯ ತಜ್ಞ ಅಂತ ಏನಾದರು ಇದ್ದರೆ ಅದು ದೇವೇಗೌಡರು ಮಾತ್ರ. 1998 ರಲ್ಲಿ ಈ ಭಾಗದ ತಂಬಾಕು ಬೆಳೆಗಾರರ ಪರ ಹೊರಾಟಮಾಡಿ ಉತ್ತಮ ಬೆಲೆಕೊಡಿಸಿ ರೈತರ ಬಳಿಗೆ ಆಶಾಕಿರಣವಾಗಿದ್ದವರು ಎಂದು ಹೇಳಿದರು.

ಎಚ್.ಡಿ.ಕೋಟೆ ಶಾಸಕ ಎಸ್.ಚಿಕ್ಕಮಾದು ಮಾತನಾಡಿ, ದೇವೇಗೌಡರ ಮನಸ್ಸು ಮಡಿದ್ದರೆ ರಾಜ್ಯದ ಕಾಂಗ್ರೆಸ್ ಸರಕಾರ ಎಂದೋ ಪತನವಾಗುತಿತ್ತು. ಆದರೆ ಗೌಡರು ಎಂದೂ ಆ ಕೆಲಸಕ್ಕೆ ಕೈಹಾಕಲಿಲ್ಲ ಅದು ಅವರ ದೊಡ್ಡಗುಣವೆಂದರು.  ಜೆಡಿಎಸ್ ಯುವ ಮುಖಂಡ ಜಿ.ಡಿ.ಹರೀಶ್ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹ ಸ್ವಾಮಿ, ಪಿರಿಯಾಪಟ್ಟಣ ಜೆಡಿಎಸ್ ತಾ ಅಧ್ಯಕ್ಷ ಕೆ.ಮಹದೇವ್, ನಗರಸಭಾಧ್ಯಕ್ಷ ಕೆ. ಲಕ್ಷ್ಮಣ್, ಕೆ. ಗಣೇಶ್ ಗೌಡ, ಜಿಪಂ ಸದಸ್ಯರಾದ ಸುರೇಂದ್ರ, ಅನೀಲ್, ಎಪಿಎಂಸಿ ಅಧ್ಯಕ್ಷ ಎಸ್. ಕುಮಾರ ನಾಗಮಂಗಲ ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin