ಜೆಡಿಎಸ್ ಕಾರ್ಯಕರ್ತ ಹರೀಶ್ ಕೊಲೆ ಪ್ರಕರಣ : 7 ಮಂದಿ ಆರೋಪಿಗಳಿಗೆ ನ್ಯಾಯಾಂಗ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

JDS-Harish-Worker-Murderf

ಕೆ.ಆರ್.ಪೇಟೆ, ಜ.5- ಜೆಡಿಎಸ್ ಕಾರ್ಯಕರ್ತ ಹರೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಏಳು ಮಂದಿ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದು, ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  ಮುರುಕನಹಳ್ಳಿ ಗ್ರಾಮದ ನಿವಾಸಿಗಳಾದ ಗಿರೀಶ್, ರಘು, ಸಂತೋಷ್, ಮದ್ದೂರು ತಾಲೂಕು ಚಾಮನಹಳ್ಳಿ ಗ್ರಾಮದ ಮಂಜು, ಹರಿಹರ ತಾಲೂಕಿನ ಮಲೆಬೆನ್ನೂರಿನ ಎಸ್.ಬಿ.ಸಿದ್ದೇಶ್, ಪಿ.ಪರಶುರಾಂ, ಗುಂಡ್ಲುಪೇಟೆ ತಾಲೂಕಿನ ಕೊಡುಗಲಾಪುರ ನಿವಾಸಿ ಶಿವು ಅವರು ಪೊಲೀಸರಿಗೆ ಶರಣಾದವರು.

ಮಂಗಳವಾರ ಬಂಧಿಸಲ್ಪಟ್ಟಿದ್ದ ರಕ್ಷಿತ್ ಮತ್ತು ಯೋಗೇಶ್ ಸೇರಿದಂತೆ ಎಲ್ಲಾ 9 ಮಂದಿ ಆರೋಪಿಗಳನ್ನು ಪಟ್ಟಣದ ಜೆಎಂಎಫ್‍ಸಿ ಹಿರಿಯ ಶ್ರೇಣಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ನ್ಯಾಯಾಧೀಶ ಗುರುಪ್ರಸಾದ್ ಕಾರಂತ್ ಅವರು ರಕ್ಷಿತ್ ಮತ್ತು ಯೋಗೇಶ್ ಅವರನ್ನು ಜ.6ವರೆಗೆ ಪೊಲೀಸ್ ವಿಚಾರಣೆ ನೀಡುವಂತೆ ಆದೇಶ ನೀಡಿದರೆ, ಉಳಿದ ಏಳು ಮಂದಿ ಆರೋಪಿಗಳನ್ನು ಇದೇ ಜ.18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಆದೇಶಿಸಿದರು.  ಇದೂವರೆವಿಗೂ ಒಟ್ಟು 9 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು ಇನ್ನೂ ಇಬ್ಬರೂ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಅವರಿಗಾಗಿ ಜಿಲ್ಲಾ ಅಪರಾಧ ವಿಭಾಗ ಇನ್ಸ್‍ಪೆಕ್ಟರ್ ಕೆ.ಪ್ರಭಾಕರ್ ನೇತೃತ್ವದ ಪೊಲೀಸ್ ತನಿಖಾಧಿಕಾರಿಗಳ ತಂಡ ಬಲೆ ಬೀಸಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin