ಜೆಡಿಎಸ್ ಪಾಲಾದ ಎಪಿಎಂಸಿ ಬೆಂಬಲಿತ 3 ಮಂದಿ ಆಯ್ಕೆ
ಕೆ.ಆರ್.ನಗರ, ಮಾ.6- ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 8 ಮಂದಿ, ಕಾಂಗ್ರೆಸ್ ಬೆಂಬಲಿತ 3 ಮಂದಿ ಆಯ್ಕೆಯಾಗಿದ್ದು , ಓರ್ವ ನಿರ್ದೇಶಕ ಪಕ್ಷೇತರರಾಗಿ ಗುರುತಿಸಿಕೊಂಡಿದ್ದಾರೆ. ಬಹುಮತ ಹೊಂದಿರುವ ಜೆಡಿಎಸ್ ಬೆಂಬಲಿತ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಂ.ಎಸ್.ಹರಿಚಿದಂಬರ ಸಂಘದ ಅಧ್ಯಕ್ಷರಾಗುವ ಸಾಧ್ಯತೆಗಳಿದ್ದು ಶಾಸಕ ಸಾ.ರಾ.ಮಹೇಶ್ ತೀರ್ಮಾನವೇ ಅಂತಿಮ.ಜೆಡಿಎಸ್ ಬೆಂಬಲಿತರಾಗಿ ಕೃಷ್ಣನಾಯಕ, ಚಿಕ್ಕಈರೇಗೌಡ, ಎಂ.ಎಸ್.ಹರಿಚಿದಂಬರ, ಸಾಕಮ್ಮ, ಎಸ್.ಡಿ.ಕೃಷ್ಣೇಗೌಡ, ರಂಗಸ್ವಾಮಿ, ಕೆ.ಎನ್.ಕೃಷ್ಣೇಗೌಡ, ಕೆ.ಇ.ಕೃಷ್ಣೇಗೌಡ ಆಯ್ಕೆಯಾಗಿದ್ದು, ಕಾಂಗ್ರೆಸ್ ಬೆಂಬಲಿತರಾಗಿ ಶಿವಲಿಂಗಯ್ಯ, ಚಿಕ್ಕೇಗೌಡ, ಸರೋಜಮ್ಮ, ಮತ್ತು ಪಕ್ಷೇತರರಾಗಿ ಕೆ.ಎಸ್.ಜಯಣ್ಣ ಚುನಾಯಿತರಾಗಿದ್ದಾರೆ.
ಜೆಡಿಎಸ್ ಬೆಂಬಲಿತ ನಿರ್ದೇಶಕರು ಶಾಸಕ ಸಾ.ರಾ.ಮಹೇಶ್ ಅವರನ್ನು ಭೇಟಿ ಮಾಡಿ ಚುನಾವಣೆಗೆ ಸಹಕಾರ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.ಜೆಡಿಎಸ್ ಮುಖಂಡರಾದ ಚಂದನ್ರಾಜೇಅರಸ್, ಮಂಚನಹಳ್ಳಿಶಿವಣ್ಣ, ಮಂಜುನಾಥ್, ದಿಡ್ಡಹಳ್ಳಿಬಸವರಾಜು, ರಾಮಾಚಾರಿ, ತ್ಯಾಗರಾಜು, ಬ್ಯಾಡರಹಳ್ಳಿಮಹದೇವ್, ಕೃಷ್ಣಕುಮಾರ್, ಆನಂದ, ಕಾಂತರಾಜು, ಜಯರಾಮೇಗೌಡ, ಗಣೇಶ್, ಶಶಿಕುಮಾರ್ ಇದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS