ಜೆಡಿಎಸ್- ಬಿಜೆಪಿ ಪಕ್ಷಗಳಿಂದ ಕಾಂಗ್ರೆಸ್‍ಗೆ ಸೇರ್ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

bjp--congres-jds

ವಿಜಯಪುರ, ಆ.25-ರಾಜ್ಯ ಸರಕಾರದ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಹತ್ತು-ಹಲವಾರು ಜನಪ್ರಿಯ ಕಾರ್ಯಕ್ರಮಗಳು ಬಡಜನತೆಗೆ ತಲುಪಿದ್ದು, ಅದರ ಪರಿಣಾಮವೇ ದೇವನಹಳ್ಳಿ ಕ್ಷೇತ್ರದ ನಾಲ್ಕೂ ಜಿಲ್ಲಾ ಪಂಚಾಯ್ತಿ ಸ್ಥಾನಗಳು ಕಾಂಗ್ರೆಸ್ ಪಕ್ಷಕ್ಕೆ ಬಂದಿವೆ ಎಂದು ಮಾಜಿ ಸಂಸದ ಸಿ.ನಾರಾಯಣಸ್ವಾಮಿ ತಿಳಿಸಿದರು. ಬೆಂ.ಗ್ರಾಮ ಜಿಲ್ಲಾ ಪಂಚಾಯ್ತಿ ಸದಸ್ಯ ಬಾಲೇಪುರದ ಲಕ್ಷ್ಮಿನಾರಾಯಣಪ್ಪರವರ ಸ್ವಗೃಹದಲ್ಲಿ ನೂರಾರು ಸಂಖ್ಯೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ತೊರೆದು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡವರನ್ನು ಸ್ವಾಗತಿಸಿ ಅವರು ಮಾತನಾಡಿದರು.

ಬೆಂ.ಗ್ರಾ.ಜಿಲ್ಲಾ ಪಂಚಾಯ್ತಿ ಸದಸ್ಯ ಬಾಲೇಪುರದ ಲಕ್ಷ್ಮಿನಾರಾಯಣಪ್ಪ ಮಾತನಾಡಿ, ಭವಿಷ್ಯದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವೇ ಭವಿಷ್ಯವಿದ್ದು, ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷವು ಮುಂದೆಯೂ ಉತ್ತಮವಾದ ಜನಪ್ರಿಯ ಸರಕಾರ ನೀಡುವಲ್ಲಿ ಯಾವುದೇ ಅನುಮಾನವೂ ಇಲ್ಲವೆಂದು, ತಿಳಿಸಿದರು. ಜೆಡಿಎಸ್ ನಿಂದ ನಲ್ಲೂರು ನಂಜೇಗೌಡ, ಚನ್ನರಾಯಪಟ್ಟಣ ಬಿಜೆಪಿಯ ಸಿ.ಎ.ದೊಡ್ಡೇಗೌಡ, ಎನ್.ನಂಜೇಗೌಡರವರುಗಳ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಕಾಂಗ್ರೆಸ್‍ಗೆ ಸೇರ್ಪಡೆಗೊಂಡರು.ತಾ.ಪಂ. ಸದಸ್ಯರಾದ ಸೋಮತ್ತನಹಳ್ಳಿ ಮಂಜುನಾಥ್, ದಿನ್ನೂರು ವೆಂಕಟೇಶ್, ರಾಮನಹಳ್ಳಿ ಮುನೇಗೌಡ,ಚನ್ನರಾಯಪಟ್ಟಣ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಐಬಸಾಪುರ ಗ್ರಾ.ಪಂ ಸದಸ್ಯ ತಮ್ಮೇಗೌಡ, ಮಲ್ಲೇಪುರ ಗಿರೀಶ್ ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin