ಜೆಡಿಎಸ್ ಶಾಸಕ ಪಿಳ್ಳಮುನಿಶಾಮಪ್ಪ ರಾಜೀನಾಮೆ, ರಾಜಕೀಯ ವಲಯದಲ್ಲಿ ಸಂಚಲನ

ಈ ಸುದ್ದಿಯನ್ನು ಶೇರ್ ಮಾಡಿ

Pilla-Muniswamappa

ಬೆಂಗಳೂರು,ಫೆ.23- ತಮ್ಮ ಅಭಿಪ್ರಾಯಕ್ಕೆ ಪಕ್ಷದಲ್ಲಿ ಯಾವುದೇ ಮನ್ನಣೆ ಸಿಗುತ್ತಿಲ್ಲ ಎಂದು ಬೇಸತ್ತ ದೇವನಹಳ್ಳಿ ಜೆಡಿಎಸ್ ಶಾಸಕ ಪಿಳ್ಳಮುನಿಶಾಮಪ್ಪ ಮುನ್ಸೂಚನೆ ನೀಡದೆ ಏಕಾಏಕಿ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡುವ ಮೂಲಕ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದರಿಂದ ಜೆಡಿಎಸ್‍ನ ಭಿನ್ನಮತ ಮತ್ತಷ್ಟು ಸ್ಪೋಟ ಗೊಂಡಂತಾಗಿದೆ. ರಾಜ್ಯಸಭಾ ಸದಸ್ಯರ ಆಯ್ಕೆ ಸಂದ ರ್ಭದಲ್ಲಿ ಅಡ್ಡ ಮತದಾನದಿಂದ ಅಮಾನತ್ತಾಗಿದ್ದ ಏಳು ಶಾಸಕರ ವಿವಾದ ಬಗೆಹರಿಯುವ ಮುನ್ನವೇ ದೇವನಹಳ್ಳಿ ಶಾಸಕ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿರುವುದು ಜೆಡಿಎಸ್ ಪಕ್ಷಕ್ಕೆ ದೊಡ್ಡ ಪೆಟ್ಟು ನೀಡಿದಂತಾಗಿದೆ.

ಜೆಡಿಎಸ್‍ಗೆ ನಿಸರ್ಗ ನಾರಾಯಣಸ್ವಾಮಿ ಅವರನ್ನು ಸೇರ್ಪಡೆ ಮಾಡಿಕೊಂಡಿರುವುದನ್ನು ವಿರೋಧಿಸಿ ಪಿಳ್ಳ ಮುನಿಶಾಮಪ್ಪನವರು ಇಂದು ಬೆಳಗ್ಗೆ ಏಕಾಏಕಿ ವಿಧಾನಸಭಾ ಸ್ಪೀಕರ್ ಕೆ.ಬಿ.ಕೋಳಿವಾಡ ಅವರ ನಿವಾಸಕ್ಕೆ ತೆರಳಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಅಲ್ಲದೆ ಯಾವುದೇ ಕಾರಣಕ್ಕೂ ತಮ್ಮ ರಾಜೀನಾಮೆಯನ್ನು ಮರುಪರಿಶೀಲಿಸುವುದಿಲ್ಲ ಎಂದು ಕೂಡ ಹೇಳಿದ್ದಾರೆ ಎನ್ನಲಾಗಿದೆ. ಕೂಡಲೇ ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಂತೆ ಅವರು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ದಿಢೀರ್ ಬೆಳವಣಿಗೆಯಿಂದ ಜೆಡಿಎಸ್ ಪಕ್ಷದ ಭಿನ್ನಮತ ಭುಗಿಲೆದ್ದಂತಾಗಿದೆ.   ಪಿಳ್ಳಮುನಿಶಾಮಪ್ಪ ಅವರು ರಾಜೀನಾಮೆ ನೀಡಿರುವುದನ್ನು ಸ್ಪೀಕರ್ ಕಚೇರಿ ದೃಢೀಕರಿಸಿದೆ. ನಾಳೆಯೊಳಗೆ ರಾಜೀನಾಮೆಯನ್ನು ಹಿಂಪಡೆಯದಿದ್ದರೆ ಪರಿಶೀಲಿಸಿ ಮುಂದಿನ ಕ್ರಮ ವಹಿಸುವುದಾಗಿ ಸ್ಪೀಕರ್ ಕೆ.ಬಿ.ಕೋಳಿವಾಡ ಕೂಡ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin