ಜೇನು ದಾಳಿಯಿಂದ ಮಾಜಿ ಜಿ.ಪಂ. ಸದಸ್ಯ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Bee

ಚಿತ್ರದುರ್ಗ.ಏ,23- ಜೇನು ದಾಳಿಯಿಂದ ದಾಳಿಯಿಂದ ಜಿ.ಪಂ. ಮಾಜಿ ಸದಸ್ಯರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮತ್ತೋಡು ಜಿ.ಪಂ.ಮಾಜಿ ಸದಸ್ಯ ಪಾಥಲಿಂಗಪ್ಪ(69) ಮೃತ ದುರ್ದೈವಿ. ಹೊಸದುರ್ಗ ತಾಲೂಕಿನ ಹೊಸಗೊಲ್ಲಹಳ್ಳಿ ತೋಟದ ಮನೆಯ ಬಳಿ ಪಾಥಲಿಂಗಪ್ಪ ಮೇಲೆ ಏಕಾಏಕಿ ಜೇನು ನೊಣಗಳು ದಾಳಿ ಮಾಡಿದ್ದವು. ಇದರಿಂದ ತೀವ್ರವಾಗಿ ಗಾಯಗೊಂಡ ಪಾಥಲಿಂಗಪ್ಪ ಸಾವನ್ನಪ್ಪಿದ್ದಾರೆ. ಈ ಸಂಬಂಧ ಸ್ಥಳೀಯ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ

Facebook Comments

Sri Raghav

Admin