ಜೈನ ಮುನಿ ವಿರುದ್ದ ಅವಹೇಳನಕಾರಿ ಟ್ವಿಟ್ : ಖಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

belgam-91

ಬೆಳಗಾವಿ.ಆ.29- ಇತ್ತೀಚಿಗೆ ಜೈನಮುನಿ ರಾಷ್ಟ್ರ ಸಂತ ಅವರು ಹರಿಯಾಣ ವಿಧಾನಸಭೆಯಲ್ಲಿ 40 ನಿಮಿಷಗಳ ಕಾಲ ನೀಡಿದ ಪ್ರವಚನಕ್ಕೆ ಸಂಬಂಧಿಸಿದಂತೆ ದೆಹಲಿ ಆಮ್ ಆದ್ಮಿ ಪಕ್ಷದ ವಕ್ತಾರ ವಿಶಾಲ ದಾದಲಾನಿ ಮತ್ತು ಕಾಂಗ್ರೆಸ್ ಮುಖಂಡ ತಹಶೀನ ಪೂನಾವಾಲಾ ಅವರು ಆಚಾರ್ಯ ತರುಣಸಾಗರಜೀ ವಿರುದ್ದ ಟ್ವೀಟರ್‍ನಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ಪ್ರಕಟಿಸಿರುವುದನ್ನು ಸಮಸ್ತ ಜೈನ ಸಮಾಜ ತೀವ್ರವಾಗಿ ಖಂಡಿಸಿದೆ.  ನಗರದ ಪೀರನವಾಡಿಯಲ್ಲಿ ಈ ಉಭಯ ಜನರ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆ ನಡೆಸಲಾಯಿತು.
ಹರಿಯಾಣ ವಿಧಾನಸಭೆಯಲ್ಲಿ ಧರ್ಮ, ರಾಜಕಾರಣ, ರಾಷ್ಟ್ರ ಪ್ರೇಮ, ಹೆಣ್ಣು ಬ್ರೂಣಹತ್ಯೆ ತಡೆಗಟ್ಟಿವಿಕೆ ಕುರಿತು ಐತಿಹಾಸಿಕ ಪ್ರವಚನ ನೀಡಿದ ರಾಷ್ಟ್ರಸಂತ ಆಚಾರ್ಯ ತರುಣಸಾಗರಜೀ ಮಹಾರಾಜರ ವಿರುದ್ದ ಆಪ್ ಪಕ್ಷದ ದೆಹಲಿ ವಕ್ತಾರ ವಿಶಾಲ ದಾದಲಾನಿ ಅವರು ತುರಣಸಾಗರಜೀ ಅವರು ಓರ್ವ ಮಂಗ ಎಂದು ಟ್ವೀಟರ್‍ನಲ್ಲಿ ಟ್ವೀಟ್ ಮಾಡಿದ್ದಾರೆ. ಇವರೊಂದಿಗೆ ಕಾಂಗ್ರೆಸ್ ಮುಖಂಡ ತಹಶೀನ ಪೂನಾವಾಲಾ ಅವರು ತರುಣಸಾಗರಜೀ ಮುನಿಗಳನ್ನು ಅರೆನಗ್ನ ಮಹಿಳೆಯೊಂದಿಗೆ ಹೋಲಿಕೆ ಮಾಡಿದ ಚಿತ್ರವನ್ನು ಟ್ವೀಟ್ ಮಾಡುವುದಲ್ಲದೇ ಅವಹೇಳನಕಾರಿ ಭಾಷೆಯನ್ನು ಬಳಿಸಿದ್ದಾರೆ. ಇದು ತಪ್ಪು ಎಂದರು.

ಈ ಇಬ್ಬರ ಟ್ವೀಟರ್‍ಗಳು ಇಂದು ಟ್ವೀಟರ್ ಮತ್ತು ವಾಟ್ಸ್‍ಪ್‍ಗಳಲ್ಲಿ ಸುದ್ದಿ ಹರಿದಾಡುತ್ತಿದ್ದಂತೆ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಜೈನ ಸಮುದಾಯದಲ್ಲಿ ಅಸಂತೋಷದ ವಾತಾವರಣ ಉಂಟಾಯಿತು. ಈ ಹಿನ್ನಲೆಯಲ್ಲಿ ಪೀರನವಾಡಿಯ ಜೈನ ಸಮಾಜ ಬೀದಿಗಿಳಿದು ಪ್ರತಿಭಟನೆ ನಡೆಸುವುದಲ್ಲದೇ ತರುಣಸಾಗರಜೀ ಮುನಿಗಳ ವಿರುದ್ದ ಅವಹೇಳನಕಾರಿ ಟ್ವೀಟ್ ಮಾಡಿದ ವ್ಯಕ್ತಿಗಳ ವಿರುದ್ದ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಬೇಕೆಂದು ಆಗ್ರಹಿಸಿದ್ದಾರೆ. ಅದಲ್ಲದೇ ಈ ಇಬ್ಬರು ವ್ಯಕ್ತಿಗಳು ಜೈನ ಸಮಾಜದ ಮತ್ತು ತರುಣಸಾಗರಜೀ ಅವರ ಬಳಿ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ವಿಶಾಲ ದಾದಲಾನಿ ಮತ್ತು ತಹಶೀನ ಪೂನಾವಾಲಾ ಅವರ ವಿರುದ್ದ  ರಾಜ್ಯಾಧ್ಯಂತ   ಹೋರಾಟ ನಡೆಸಲಾಗುವುದೆಂದು ಎಚ್ಚರಿಸಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin