ಜೈಲಿನಲ್ಲಿರುವ ಸ್ನೇಹಿತರ ಪರ ಕೇಸ್ ನಡೆಸಲು ಹಣಕ್ಕಾಗಿ ದರೋಡೆ : ನಾಲ್ವರ ಬಂಧನ 

ಈ ಸುದ್ದಿಯನ್ನು ಶೇರ್ ಮಾಡಿ

Jail-Arrest
ಮೈಸೂರು,ಏ.9-ಜೈಲಿನಲ್ಲಿರುವ ಸ್ನೇಹಿತರ ಪರ ಕೇಸ್ ನಡೆಸಲು ಹಣಕ್ಕಾಗಿ ದರೋಡೆ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಪಡುವಾರಳ್ಳಿಯ ಪರಮೇಶ್(26), ಹೇಮಂತ್ ನಾಯಕ್ (25), ಮುಕುಂದ(26) ಮತ್ತು ಕುಂಬಾರ ಕೊಪ್ಪಲಿನ ಪ್ರಶಾಂತ್(25) ಬಂಧಿತ ಆರೋಪಿಗಳು. ಬಂಧಿತರಿಂದ ಎರಡು ಸ್ಕೂಟರ್ , ದರೋಡೆಗೆ ತಂದಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.ಏ.6ರಂದು ರಾತ್ರಿ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಗೋಕುಲಂನ 3ನೇ ಹಂತದಲ್ಲಿ ಸಿಸಿಬಿ ಪೊಲೀಸರು ಗಸ್ತಿನಲ್ಲಿದ್ದಾಗ 6 ಮಂದಿ ಎರಡು ಬೈಕ್ ನಿಲ್ಲಿಸಿಕೊಂಡು ದರೋಡೆಗೆ ಹೊಂಚು ಹಾಕುತ್ತಿದ್ದರು. ಈ ವೇಳೆ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ನಾಲ್ವರನ್ನು ಹಿಡಿದು ವಿಚಾರಣೆ ನಡೆಸಿದಾಗ ದರೋಡೆಗೆ ಹೊಂಚು ಹಾಕುತ್ತಿದ್ದಾಗಿ ತಿಳಿಸಿದ್ದಾರೆ.ತಮ್ಮ ಸ್ನೇಹಿತರಾದ ಮುಖೇಶ್, ಹೇಮಂತ್‍ಕುಮಾರ್, ಕುಂಡ ಸೀನ ಎಂಬುವರು ಜೈಲಿನಲ್ಲಿದ್ದಾರೆ. ಅವರ ಪರವಾಗಿ ಕೇಸ್ ನಡೆಸಲು ಹಣದ ಅವಶ್ಯಕತೆ ಇದ್ದುದ್ದರಿಂದ ದರೋಡೆಗೆ ಮುಂದಾಗಿದ್ದೆವು ಎಂದು ಆರೋಪಿಗಳು ತಿಳಿಸಿದ್ದಾರೆ. ಈ ಸಂಬಂಧ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin