ಜೈಲಿನಲ್ಲೇ ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ : ಉಗ್ರರ ಪಾಕ್ ಸಂಪರ್ಕ ಜಾಲ ಧ್ವಂಸ, 16 ಮೊಬೈಲ್‍ಗಳು ವಶ

ಈ ಸುದ್ದಿಯನ್ನು ಶೇರ್ ಮಾಡಿ

Jail--01

ಶ್ರೀನಗರ, ಏ.3-ಪಾಕಿಸ್ತಾನದೊಂದಿಗೆ ಸಂಪರ್ಕ ಸಾಧಿಸಿ ಕಾಶ್ಮೀರ ಸೇರಿದಂತೆ ದೇಶದ ಹಲವೆಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಕಾಶ್ಮೀರ ಕಣಿವೆಯ ಬಾರಾಮುಲ್ಲಾ ಕಾರಾಗೃಹದಲ್ಲಿ ರೂಪುಗೊಳ್ಳುತ್ತಿದ್ದ ಭಾರೀ ಕುತಂತ್ರದ ಸಂಚನ್ನು ಪೊಲೀಸರು ಭೇದಿಸಿದ್ದಾರೆ. ಪ್ರತ್ಯೇಕತಾವಾದಿಗಳ ವ್ಯವಸ್ಥಿತ ಜÁಲವನ್ನು ಧ್ವಂಸಗೊಳಿಸಲಾಗಿದ್ದು, ಸಂಪರ್ಕಕ್ಕೆ ಬಳಸಲಾಗುತ್ತಿದ್ದ 16 ಸ್ಮಾರ್ಟ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಿಂದ ಮುಂದೆ ಸಂಭವಿಸಬಹುದಾಗಿದ್ದ ವಿಚ್ಛಿದ್ರಕಾರಿ ಕೃತ್ಯಗಳು ತಪ್ಪಿದಂತಾಗಿದೆ.

ಪಾಕಿಸ್ತಾನವು ಸಾಮಾಜಿಕ ಪೊಲತಾಣಗಳ ಮೂಲಕ ಸ್ಥಳೀಯ ಪ್ರತ್ಯೇಕಾವಾದಿಗಳು ಮತ್ತು ಉಗ್ರರನ್ನು ಸಂಪರ್ಕಿಸಿ ಶಾಂತಿ ಕದಡಲು ಯತ್ನಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಈ ಭಾರೀ ಕುತಂತ್ರ ಬಹಿರಂಗಗೊಂಡಿದೆ.   ಖಚಿತ ಸುಳಿವಿನ ಮೇರೆಗೆ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉಪ ಬಂದೀಖಾನೆಯಲ್ಲಿ ಪೊಲೀಸರು ಹಠಾತ್ ತಪಾಸಣೆ ನಡೆಸಿದಾಗ ಕೆಲವು ಕೈದಿಗಳ ಬಳಿ 16 ಸೆಲ್ ಫೋನ್‍ಗಳು ಇರುವುದು ಪತ್ತೆಯಾಯಿತು. ಭಯೋತ್ಪಾದನೆ, ಹಿಂಸಾಚಾರ, ದೇಶದ್ರೋಹ ಕೃತ್ಯಗಳಲ್ಲಿ ಶಿಕ್ಷೆಗೆ ಗುರಿಯಾಗಿರುವ ಪ್ರತ್ಯೇಕತಾವಾದಿಗಳ ಬಳಿ ಇವು ಪತ್ತೆಯಾದವು ಎಂದು ಬಾರಾಮುಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಮ್ತಿಯಾಜ್ ಹುಸೇನ್ ಹೇಳಿದ್ದಾರೆ.

ಪಾಕಿಸ್ತಾನದಲ್ಲಿರುವ ಭಯೋತ್ಪಾದಕರನ್ನು ಸಂಪರ್ಕಿಸಿ ಅವರ ನೆರವಿನಿಂದ ಕಾಶ್ಮೀರ ಕಣಿವೆಯಲ್ಲಿ ಶಾಂತಿ ಕದಡಿ ಹಿಂಸಾಚಾರ ನಡೆಸುವುದು ಈ ಜಾಲದ ಉದ್ದೇಶವಾಗಿತ್ತು ಎಂದು ಅವರು ತಿಳಿಸಿದ್ಧಾರೆ. ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ಒಂದು ವಾರದಿಂದ ಕಾಶ್ಮೀರ ಕಣಿವೆಯಲ್ಲಿ ಶಾಂತಿ-ಸುವ್ಯವಸ್ಥೆ ಹದಗೆಟ್ಟಿದ್ದು, ಹಿಂಸಾಚಾರ ಭುಗಿಲೆದ್ದು, ಸಾವು-ನೋವು ಉಂಟಾಗಿವೆ.  ವ್ಯಾಟ್ಸ್‍ಆ್ಯಪ್ ಕರೆ ಮತ್ತು ಸಂದೇಶಗಳು ಪಾಕಿಸ್ತಾನವನ್ನು ತಲುಪುತ್ತಿರುವ ಜಾಡಿನ ಬೆನ್ನಟ್ಟಿದ ಪೊಲೀಸರಿಗೆ ಬಾರಾಮುಲ್ಲಾ ಸಬ್‍ಜೈಲಿನಿಂದಲೇ ಅವು ರವಾನೆಯಾಗುತ್ತಿರುವುದು ಪತ್ತೆಯಾಯಿತು.

ಈ ಉಪ ಕಾರಾಗೃಹದಲ್ಲಿ ಕೆಲವು ಉಗ್ರರು ಮತ್ತು ಪ್ರತ್ಯೇಕತಾವಾದಿಗಳಿದ್ದಾರೆ. ಅವರ ಬಳಿ ಇದ್ದ ಸ್ಮಾರ್ಟ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ವ್ಯಾಟ್ಸ್‍ಆ್ಯಪ್ ಮೂಲಕ ಪಾಕಿಸ್ತಾನದ ಕೆಲವು ಸಂಖ್ಯೆಗಳೊಂದಿಗೆ ಇವರು ಸಂಪರ್ಕ ಸಾಧಿಸಿರುವುದು ದೃಢಪಟ್ಟಿದೆ. ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಶೀಲಿಸಿದ್ದು, ಈ ಜಾಲದಲ್ಲಿರುವ ಇತರ ಸಂಪರ್ಕಗಳನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಮ್ತಿಯಾಜ್ ವಿವರಿಸಿದ್ದಾರೆ. ಕಾಶ್ಮೀರದಲ್ಲಿ 2010ರಿಂದಲೂ ಅಶಾಂತಿಗೆ ಕುಮ್ಮಕ್ಕು ನೀಡುತ್ತಿದ್ದ ಪ್ರತ್ಯೇಕತಾವಾದಿ ನಾಯಕ ಮಸರತ್ ಅಲಂ ಬಳಿ ಇದ್ದ ಎರಡು ಸೆಲ್‍ಫೋನ್‍ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈತ ಹಲವು ಹಿಂಸಾಚಾರಗಳಲ್ಲಿ ಶಾಮೀಲಾಗಿದ್ದು, ಶ್ರೀನಗರದಲ್ಲಿ ಪಾಕಿಸ್ತಾನ ಪರ ರ್ಯಾಲಿ ನಡೆಸಿದ್ದ.

ಕಳೆದ ವಾರ ಭಯೋತ್ಪಾದಕರು ಜೈಲಿನ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ನಡೆಸಿ ಕಾರನ್ನು ಸುಟ್ಟು ಬಾರಾಮುಲ್ಲಾ ಬಂದೀಖಾನೆಯ ಕೈದಿಗಳಿಗೆ ಹಿಂಸೆ ನೀಡಬಾರದು ಎಂದು ಪ್ರಾಣ ಬೆದರಿಕೆ ಹಾಕಿದ್ದರು. ಅಲ್ಲದೇ ಪೊಲೀಸ್ ಅಧಿಕಾರಿಯೊಬ್ಬರ ಮನೆಗೂ ನುಗ್ಗಿ ಕುಟುಂಬದ ಸದಸ್ಯರನ್ನು ಉಗ್ರರು ಒತ್ತೆಯಾಳಾಗಿಟ್ಟುಕೊಂಡು ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin