ಜೈಲಿನಿಂದ ಪರಾರಿಯಾಗಿದ್ದ ಆರೋಪಿ ಪತ್ತೆಗೆ ಪೊಲೀಸರ ಮನವಿ
ಈ ಸುದ್ದಿಯನ್ನು ಶೇರ್ ಮಾಡಿ
ತುಮಕೂರು,ಆ.15- ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡಿರುವ ಆರೋಪಿ ರಂಗಪ್ಪ ಅಲಿಯಾಸ್ ಪ್ರತಾಪ ಅಲಿಯಾಸ್ ಡೈರೆಕ್ಟರ್(38) ಎಂಬಾತನ ಪತ್ತೆಗೆ ಪೊಲೀಸರು ಮನವಿ ಮಾಡಿದ್ದಾರೆ.
ತುಮಕೂರಿನ ಯಲ್ಲಾಪುರದಲ್ಲಿ ವಾಸವಾಗಿದ್ದ ಈತ ಮೂಲತಃ ಮಧುಗಿರಿ ತಾಲ್ಲುಕು ಮಿಡಿಗೇಶಿ ಹೋಬಳಿ ಕಾಟಗೊಂಡನಹಳ್ಳಿ ನಿವಾಸಿ. ಆ.6ರಂದು ರಾತ್ರಿ 10.20ರಂದು ಸಿನಿಮೀಯ ರೀತಿ ಕೋರಾ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡಿದ್ದಾನೆ.
5.6 ಅಡಿ ಎತ್ತರ, ಕಂದು ಮೈಬಣ್ಣ, ಕೋಲುಮುಖ, ಸಾಧಾರಣ ಮೈಕಟ್ಟು, ಮೂಗಿನ ಮೇಲೆ ಹಳೆ ಗಾಯದ ಗುರುತು ಇದೆ. ಎಡಗೈ ಉಂಗುರದ ಬೆರಳು ಸೊಟ್ಟಗಿದೆ. ತೊದಲು ಮಾತನಾಡುತ್ತಾನೆ.
ಸದಾ ಟೀಶರ್ಟ್, ಪ್ಯಾಂಟ್ ಧರಿಸುವ ಈತ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಾನೆ. ಕನ್ನಡ, ತೆಲುಗು ಭಾಷೆ ಮಾತನಾಡುವ ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ಕೂಡಲೇ ಪೆÇಲೀಸ್ ಕಂಟ್ರೋಲ್ ರೂ. ಮೊಬೈಲ್ 9480802900 ಅಥವಾ 948082949 ಸಂಪರ್ಕಿಸಲು ಮನವಿ ಮಾಡಲಾಗಿದೆ.
Facebook Comments