ಜೈಲಿನಿಂದ ಹೊರಬಂದ ಮಹದಾಯಿ ಹೋರಾಟಗಾರರಿಗೆ ಮುರುಘಾ ಶ್ರೀಗಳಿಂದ ಆತಿಥ್ಯ

ಈ ಸುದ್ದಿಯನ್ನು ಶೇರ್ ಮಾಡಿ

Murugha-1

ಚಿತ್ರದುರ್ಗ,ಆ.13-ಇಂದು ಜೈಲಿನಿಂದ ಬಿಡುಗಡೆಯಾದ ಐತಿಹಾಸಿಕ ಮಹದಾಯಿ ಹೋರಾಟಗಾರರಿಗೆ  ಮುರುಘಾ ಶರಣರು ಚಿತ್ರದುರ್ಗದ  ಕಲ್ಲಿನ ಕೋಟೆ ವೀಕ್ಷಣೆಯ ಭಾಗ್ಯ ಹಾಗೂ ರೈತರು ಅವರ ಸ್ವಗ್ರಾಮಗಳಿಗೆ ತೆರಳಲು ಬಸ್ ಭಾಗ್ಯ ಕಲ್ಪಿಸುವ ಮೂಲಕ ತಮ್ಮ ಎಂದಿನ ಸಾಮಾಜಿಕ ಕಾಳಜಿ ಪ್ರದರ್ಶಿಸಿದ್ದಾರೆ.   ಮಹದಾಯಿ ಹೋರಾಟದಲ್ಲಿ ಭಾಗಿಗಳಾಗಿ ಬಂಧಿತರಾಗಿದ್ದ ಒಟ್ಟು 187 ರೈತರಲ್ಲಿ 57 ರೈತರು ಚಿತ್ರದುರ್ಗ ಕಾರಾಗೃಹದಲ್ಲಿದ್ದರು. ಉಳಿದವರ ಪೈಕಿ 130 ಜನ ಬಳ್ಳಾರಿ ಜೈಲು ಹಾಗೂ ಧಾರವಾಡ ಜೈಲಿನಲ್ಲಿದ್ದರು.   ನಿನ್ನೆ ಧಾರವಾಡ ನ್ಯಾಯಾಲಯ ಎಲ್ಲ  ರೈತರಿಗೂ( ಇಬ್ರಾಹಿಂ ಸಾಬ್ ಹೊರತುಪಡಿಸಿ) ಜಾಮೀನು ನೀಡಿದ್ದು, ನಿನ್ನೆ ರಾತ್ರಿ ಇವರ ಬಿಡುಗಡೆಯಾಗಿತ್ತು. ಬಿಡುಗಡೆ ನಂತರ ರಾತ್ರಿ ಎಲ್ಲ ರೈತರನ್ನು ಮಠಕ್ಕೆ ಕರೆದೊಯ್ದು ಅಲ್ಲಿಯೇ ಊಟ ಮತ್ತು ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದ ಶರಣರು ಇಂದು ಬೆಳಗ್ಗೆ ಅವರಿಗೆ ಉಪಹಾರದ ನಂತರ ಕೋಟೆ ದರ್ಶನಕ್ಕೆ ಏರ್ಪಾಟು ಮಾಡಿದರು.

ಊಟ-ತಿಂಡಿ, ಬಸ್ ಸೌಲಭ್ಯ:

ಸಾಮಾಜಿಕ ಕಾಳಜಿ, ಜನಪರ ಕಾರ್ಯಗಳಿಗೆ ಸದಾ ತಮ್ಮನ್ನು ತೆರೆದುಕೊಂಡಿರುವ ಶ್ರೀ ಮುರುಘಾ ಶರಣರು ಬಿಡುಗಡೆಯಾಗುತ್ತಿದ್ದಂತೆಯೇ  ಎಲ್ಲ ರೈತರನ್ನು ಮಠಕ್ಕೆ ಕರೆಸಿಕೊಂಡು ಅವರ ಯೋಗಕ್ಷೇಮ ವಿಚಾರಿಸಿದರು.   ಇದಕ್ಕೂ ಮುನ್ನ ಕಳೆದ ವಾರ ಶ್ರೀ ಶರಣರು ಚಿತ್ರದುರ್ಗ ಕೇಂದ್ರ ಕಾರಾಗೃಹಕ್ಕೆ ತೆರಳಿ ಅಲ್ಲಿದ್ದ ಹೋರಾಟಗಾರರನ್ನು ಮಾತನಾಡಿಸಿ ಅವರಿಗೆ ಹಣ್ಣುಗಳನ್ನು ವಿತರಿಸಿ ಧೈರ್ಯ ಹೇಳಿ ಬಂದಿದ್ದರು.  ಬೆಳಗಿನ ಉಪಹಾರದ ನಂತರ ನವಲಗುಂದದ ಎಲ್ಲ ರೈತರಿಗೂ ಚಿತ್ರದುರ್ಗದ ಕಲ್ಲಿನ ಕೋಟೆಯ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟರು. ಮಠಕ್ಕೆ ಆಗಮಿಸಿದ ರೈತರು ಮಧ್ಯಾಹ್ನದ ಊಟವನ್ನೂ ಅಲ್ಲಿಯೇ ಮುಗಿಸಿಕೊಂಡು  ಸುಮಾರು 60 ಹಾಸನಗಳ ಸಾಮಥ್ರ್ಯದ ಶ್ರೀ ಮಠದ ಬಸ್ಸೊಂದರಲ್ಲಿ  ಎಲ್ಲರನ್ನು ಅವರ ಊರಿಗೆ ಕಳುಹಿಸಿಕೊಟ್ಟರು. ಜೊತೆಯಲ್ಲಿ ಮಠದ ಒಬ್ಬ ಪ್ರತಿನಿಧಿಯನ್ನು ಕೂಡ ಸ್ವಾಮೀಜಿ ಕಳುಹಿಸಿಕೊಟ್ಟಿದ್ದಾರೆ.

Murugha--2

ಕೃತಜ್ಞತೆ ಸಲ್ಲಿಸಿದ ರೈತರು:

ಮುರುಘಾ ರಾಜೇಂದ್ರ ಬೃಹನ್ಮಠದ ಶ್ರೀ ಮುರುಘಾ ಶರಣದ ಈ ಮಾನವೀಯ ಗುಣಕ್ಕೆ ಮಾರು ಹೋದ ನವಲಗುಂದ ರೈತರು ಸ್ವಾಮೀಜಿಯವರಿಗೆ ಕೃತಜ್ಞತೆ ಸಲ್ಲಿಸಿದರು.   ಇದೇ ವೇಳೆ ರೈತರಿಗೆ ಸಾಂತ್ವನ ಹೇಳಿದ ಸ್ವಾಮೀಜಿಗಳು ನಾವು ಸದಾ ನಿಮ್ಮೊಂದಿಗಿದ್ದೇವೆ, ನೀವು ಯಾವುದೇ ವಿಷಯದಲ್ಲಿ ಹೆದರಬಾರದು ಎಂದು ಅಭಯ ನೀಡಿದರು.

► Follow us on –  Facebook / Twitter  / Google+

Facebook Comments

Sri Raghav

Admin