ಜೈಲುಪಾಲಾದ ಮರಿಗೌಡ : ಆ.16 ರ ವರೆಗೆ ನ್ಯಾಯಾಂಗ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Marigowdaಮೈಸೂರು  ಆ.03 :  ಮೈಸೂರು ಡಿಸಿ ಶಿಖಾ ಅವರಿಗೆ  ಕರ್ತವ್ಯಕ್ಕೆ ಅಡ್ಡಿ ಹಾಗೂ  ಧಮ್ಕಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತ ಮರಿಗೌಡ ಅವರು ಜೈಲುಪಾಲಾಗಿದ್ದಾರೆ.   ನಜರಾಬಾದ್ ಪೊಲೀಸರು ಇಂದು ಮಧ್ಯಾಹ್ನ ಶರಣಾಗಿದ್ದ ಮರಿಗೌಡ ಅವರನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ನ್ಯಾಯಾಧೀಶರು ಆರೋಪಿಯನ್ನು ಆ.16 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ.   ಮರಿಗೌಡ  ಕೊನೆಗೂ 32 ದಿನಗಳ ನಂತರ ಇಂದು ನಜರ್‌ಬಾದ್ ಪೊಲೀಸ್ ಠಾಣೆಗೆ ಶರಣಾಗಿದ್ದರು.   ಘಟನೆ ನಂತರ ತಲೆಮರೆಸಿಕೊಂಡಿದ್ದ ಮರಿಗೌಡ ಜಾಮೀನು ಕೋರಿ ಮೈಸೂರು ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಅದು ತಿರಸ್ಕೃತಗೊಂಡ ನಂತರ ಹೈಕೋರ್ಟ್‌ಗೆ ನಿರೀಕ್ಷಣಾ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸುವ ಇಂಗಿತ ವ್ಯಕ್ತಪಡಿಸಿದ್ದರಿಂದ ಮರಿಗೌಡ ತನ್ನ ಅರ್ಜಿಯನ್ನು ನಿನ್ನೆಯಷ್ಟೆ ಹಿಂದಕ್ಕೆ ಪಡೆದಿದ್ದರು.

ಡಿಸಿ ಶಿಖಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಧಮ್ಕಿ ಹಾಕಿದ್ದ ಪ್ರಕರಣದಲ್ಲಿ ಜಿಲ್ಲಾಧಿಕಾರಿ ದೂರು ನೀಡುತ್ತಿದ್ದಂತೆ ಮರಿಗೌಡ ಅವರು ನಾಪತ್ತೆಯಾಗಿದ್ದರು. ಎಂತೆಂಥ ಪ್ರಕರಣಗಳನ್ನು ಭೇದಿಸುವ ಪೊಲೀಸರಿಗೆ ಒಬ್ಬ ಮರಿಗೌಡನನ್ನು ಬಂಧಿಸಲು ಸಾಧ್ಯವಾಗಲಿಲ್ಲವೆ.  ಎಂದು ನ್ಯಾಯಾಲಯ ಪೊಲೀಸರಿಗೆ ಚಾಟಿ ಬೀಸಿತ್ತು. ಮರಿಗೌಡ ಕೇರಳ, ದೆಹಲಿ, ಆಂಧ್ರ ಸೇರಿದಂತೆ ವಿವಿಧೆಡೆ ತಲೆಮರೆಸಿಕೊಂಡಿದ್ದಾನೆಂಬ ಸುದ್ದಿಗಳು ಎಲ್ಲೆಡೆ ಹಬ್ಬಿದ್ದವು. ಆದರೆ, ನಿಜಕ್ಕೂ ಮರಿಗೌಡ ಎಲ್ಲಿದ್ದರು ಎಂಬುದು ತನಿಖೆ ನಂತರವಷ್ಟೆ ತಿಳಿಯಬೇಕಾಗಿದೆ.   ಸಿಎಂ ಪರಮಾಪ್ತನಾಗಿದ್ದ ಮರಿಗೌಡನನ್ನು ಸರ್ಕಾರವೇ ರಕ್ಷಣೆ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದ್ದವು.   ಡಿಸಿಗೆ ಧಮ್ಕಿ ಹಾಕಿ ಕಾನೂನಿನ ಕೈಯಿಂದ ತಪ್ಪಿಸಿಕೊಂಡಿದ್ದ ಮರಿಗೌಡ ಅವರಿಗೆ ಶರಣಾಗತನಾಗದೆ ಬೇರೆ ದಾರಿ ಇರಲಿಲ್ಲ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin