ಜೊತೆಯಲ್ಲಿದ್ದ ಸ್ನೇಹಿತರಿಂದಲೇ ಆಟೋ ಚಾಲಕನ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

Murder

ಬೆಂಗಳೂರು, ಆ.20-ಜೊತೆಯಲ್ಲಿದ್ದವರೆ ಸ್ನೇಹಿತನನ್ನು ಇರಿದು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ನೇಹಿತರಿಂದಲೇ ಕೊಲೆಯಾದ ವ್ಯಕ್ತಿಯನ್ನು ಕಲಾಸಿಪಾಳ್ಯದ ನಿವಾಸಿ, ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಅಜರುದ್ದೀನ್ (27) ಎಂದು ಗುರುತಿಸಲಾಗಿದೆ. ಈತ ಕಲಾಸಿಪಾಳ್ಯಕ್ಕೆ ಬರುವ ಮೊದಲು ಶಿವಾಜಿನಗರದ ನಿವಾಸಿಯಾಗಿದ್ದ. ನಿನ್ನೆ ಶಿವಾಜಿನಗರಕ್ಕೆ ಬಂದಿದ್ದ ಅಜರುದ್ದೀನ್, ತನ್ನ ಇಬ್ಬರು ಸ್ನೇಹಿತರೊಂದಿಗೆ 11 ಗಂಟೆ ಸಮಯದಲ್ಲಿ ಬಾಡಿಗೆ ಆಟೋದಲ್ಲಿ ಟ್ಯಾನರಿ ರಸ್ತೆಗೆ ತೆರಳುತ್ತಿದ್ದ. ನೇತಾಜಿ ರಸ್ತೆಯ ಜಿ.ಕೆ.ವೇಲು ಸ್ಟುಡಿಯೋ ಸಮೀಪ ಆಟೋ ಚಾಲಕ ಮೆಡಿಕಲ್ ಸ್ಟೋರ್‍ಗೆ ಹೋಗಿ ಬರುವುದಾಗಿ ಆಟೋ ನಿಲ್ಲಿಸಿ ತೆರಳಿದ್ದ. ಮತ್ತೆ ಆತ ವಾಪಸ್ಸಾದಾಗ ಆಟೋದಲ್ಲಿದ್ದ ಅಜರುದ್ದೀನ್ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆತನ ಜೊತೆಯಲ್ಲಿದ್ದ ಇಬ್ಬರು ನಾಪತ್ತೆಯಾಗಿದ್ದರು. ತಕ್ಷಣ ಆಟೋ ಚಾಲಕ ಅಜರುದ್ದೀನ್‍ನನ್ನು ಸ್ಥಳೀಯ ಆಸ್ಪತ್ರೆಗೆ ಕರೆತಂದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

ಅಜರುದ್ದೀನ್‍ಗೆ ಚಾಕುವಿನಿಂದ ಇರಿಯಲಾಗಿದ್ದು, ಆತನ ಜೊತೆಯಲ್ಲಿದ್ದವರೇ ಕೊಲೆ ಮಾಡಿ ಪರಾರಿಯಾಗಿದ್ದು, ಯಾವ ಕಾರಣಕ್ಕೆ ಸ್ನೇಹಿತನನ್ನೇ ಇರಿದು ಕೊಲೆ ಮಾಡಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಟೋ ಚಾಲಕನಿಂದ ಮಾಹಿತಿ ಪಡೆದಿರುವ ಪುಲಕೇಶಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

Facebook Comments

Sri Raghav

Admin