‘ಜ್ಯೂಸ್ ಕೊಟ್ಟರು ಅಂತ ಶತ್ರು ರಾಷ್ಟ್ರಾನ ಹೊಗಳೋದಲ್ಲ’ :ರಮ್ಯಾಗೆ ಅಬ್ದುಲ್ ಅಜೀಮ್ ಟಾಂಗ್

ಈ ಸುದ್ದಿಯನ್ನು ಶೇರ್ ಮಾಡಿ

Abdul-Azeem

ಬೆಂಗಳೂರು, ಆ.26-ಪಾಕಿಸ್ತಾನ ನಮ್ಮ ದೇಶದ ಮೊದಲ ಶತ್ರುರಾಷ್ಟ್ರ. ಅಲ್ಲಿ ಒಂದು ಕಪ್ ಜ್ಯೂಸ್ ಕೊಟ್ಟರು ಎಂಬ ಕಾರಣಕ್ಕೆ ಆ ದೇಶವನ್ನೇ ಹೊಗಳುವುದು ಸರಿಯಲ್ಲ ಎಂದು ನಟಿ, ಮಾಜಿ ಸಂಸದೆ ರಮ್ಯಾಗೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್ ಅಜೀಮ್ ಟಾಂಗ್ ನೀಡಿದರು.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮೀರ ಸೇರಿದಂತೆ ವಿಶ್ವದ ಅನೇಕ ಸಮಸ್ಯೆಗಳಿಗೆ ಪಾಕಿಸ್ತಾನವೇ ಕಾರಣ. ಭಾರತದ ಮೊದಲ ಶತ್ರುರಾಷ್ಟ್ರ. ಅಲ್ಲಿ ಹೋಗಿದ್ದಾಗ ಜ್ಯೂಸೋ, ಟೀನೋ ಕೊಟ್ಟರು ಎಂದಾಕ್ಷಣಕ್ಕೆ ಆ ದೇಶವನ್ನೇ ರಮ್ಯಾ ಹೊಗಳುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ. ರಮ್ಯಾ ತಕ್ಷಣ ನಮ್ಮ ದೇಶದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ:
ಕಾಂಗ್ರೆಸ್ನಲ್ಲಿರುವ ಮುಸ್ಲಿಮರು ಮಾತ್ರ ನಿಜವಾದ ಮುಸ್ಲಿಮರು, ಬೇರೆ ಪಕ್ಷಗಳಲ್ಲಿರುವ ಮುಸ್ಲಿಮರು ನಿಜವಾದ ಮುಸ್ಲಿಮರಲ್ಲ ಎಂಬಂತೆ ಸಚಿವ ರೋಷನ್ಬೇಗ್ ಬಿಂಬಿಸುತ್ತಿ ದ್ದಾರೆ ಎಂದು ಅಬ್ದುಲ್ ಅಜೀಮ್ ಟೀಕಾಪ್ರಹಾರ ನಡೆಸಿದರು.  ಕಾಂಗ್ರೆಸ್ ಸರ್ಕಾರದ ಕೌಂಟ್ಡೌನ್ ಪ್ರಾರಂಭವಾಗಿದೆ. ಕಾಂಗ್ರೆಸ್ನಲ್ಲಿರುವವರು ಮಾತ್ರವೇ ವರ್ಜಿನಲ್ ಮುಸ್ಲಿಮರಾ ಎಂದು ಪ್ರಶ್ನಿಸಿದರು.  ಬೆಂಗಳೂರಿನಲ್ಲಿ ಹಜ್ ಭವನ ಕಟ್ಟಬೇಕೆಂಬುದು ಬಿಜೆಪಿಯ ಬಹುದಿನಗಳ ಕನಸಾಗಿತ್ತು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮುಮ್ತಾಜ್ ಅಲಿ ಖಾನ್ ವಕ್ಫ್ ಸಚಿವರಾಗಿದ್ದರು. ಅವರ ಪ್ರಯತ್ನದ ಫಲವಾಗಿ ಹಜ್ ಭವನ ಸ್ಯಾಂಕ್ಷನ್ ಆಯಿತು. ಡಿ.ವಿ.ಸದಾನಂದಗೌಡರು ಶಂಕು ಸ್ಥಾಪನೆ ನರವೇರಿಸಿದರು. ಇದರ ಕ್ರೆಡಿಟ್ ಸಂಪೂರ್ಣವಾಗಿ ಬಿಜೆಪಿಗೆ ಸಲ್ಲಬೇಕು. ಆದರೆ ಕಾಂಗ್ರೆಸ್ ಇದನ್ನು ಹೈಜಾಕ್ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಈಗ ಹಜ್ ಭವನಕ್ಕೆ ಸುಣ್ಣಬಣ್ಣ ಬಳಿದುಕೊಂಡು ಇಡೀ ಕಾರ್ಯಕ್ರಮ ಕಾಂಗ್ರೆಸ್ ಸರ್ಕಾರದ್ದೆಂದು ಬಿಂಬಿಸಿಕೊಳ್ಳುತ್ತಿ ದ್ದಾರೆ. ವಕ್ಫ್ ಕಮಿಟಿಯಲ್ಲಿ ನಾನು ಹಿಂದೆ ಸದಸ್ಯನಾಗಿದ್ದೆ. ಹಜ್ ಭವನಕ್ಕೆ ರೂವಾರಿಯಾದ ಮುಮ್ತಾಜ್ ಅಲಿಖಾನ್ರನ್ನು ಕನಿಷ್ಠ ಸೌಜನ್ಯಕ್ಕಾದರೂ ಕಾಂಗ್ರೆಸ್ನವರು ಆಹ್ವಾನಿಸಿಲ್ಲ. ರೋಷನ್ಬೇಗ್ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಪ್ರತಿಪಕ್ಷದವರಿಗೆ ಕಾರ್ಯಕ್ರಮಗಳಿಗೆ ಆಹ್ವಾನ ನೀಡಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲ ಎಂದು ಟೀಕಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin