ಜ್ಯೂ. ನೊಬೆಲ್ ಪ್ರಶಸ್ತಿ : ಭಾರತದ ಬಾಲಕಿ-ಬಾಲಕರ ಪ್ರಾಬಲ್ಯ

ಈ ಸುದ್ದಿಯನ್ನು ಶೇರ್ ಮಾಡಿ

Indrani--01

ವಾಷಿಂಗ್ಟನ್, ಮಾ.18- ಜ್ಯೂನಿಯರ್ ನೊಬೆಲ್ ಪ್ರಶಸ್ತಿ ಎಂದೇ ಕರೆಯಲ್ಪಡುವ ಪ್ರತಿಷ್ಠಿತ ರೀಜನರೇಷನ್ ಸೈನ್ಸ್ ಟಾಲೆಂಟ್ ಸರ್ಚ್ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಅಮೆರಿಕದ ಬಾಲಕಿ ಇಂದ್ರಾಣಿ ದಾಸ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಮೆದುಳಿನ ಗಾಯಗಳು ಮತ್ತು ರೋಗಕ್ಕೆ ಚಿಕಿತ್ಸೆ ನೀಡುವುದಕ್ಕೆ ಸಂಬಂಧಪಟ್ಟ ಮಹತ್ವದ ಸಂಶೋಧನೆಗಾಗಿ ಈ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯ ಮೊತ್ತ 2.5 ಲಕ್ಷ ಡಾಲರ್ (1.63 ಕೋಟಿ ರೂ.ಗಳು).  ಇನ್ನೊಬ್ಬ ಭಾರತೀಯ ಮೂಲದ ಬಾಲಕ ಅರ್ಜುನ್ ರಮಣಿ ತೃತ್ತೀಯ ಸ್ಥಾನ ಗಳಿಸಿದ್ದಾರೆ. ಈ ಪ್ರಶಸ್ತಿಯು 1.5 ಲಕ್ಷ ಡಾಲರ್ (98 ಲಕ್ಷ ರೂ.ಗಳು) ನಗದು ಬಹುಮಾನ ಹೊಂದಿದೆ. ಮ್ಯಾಥೆಮ್ಯಾಟಿಕಲ್ ಫೀಲ್ಡ್ ಆಫ್ ಗ್ರಾಫ್ ಥಿಯರಿ ಮತ್ತು ಕಂಪ್ಯೂಟರ್ ಪ್ರೋಗ್ರಾಮಿಂಗ್ ಆಧಾರಿತ ನೆಟ್‍ವರ್ಕ್‍ಗಳ ಕುರಿತ ಸಂಶೋಧನೆಗಾಗಿ ಈ ಗೌರವ ಲಭಿಸಿದೆ.

ಮತ್ತೊರ್ವ ಭಾರತದ ಬಾಲಕಿ ಅರ್ಚನಾ ಅರ್ಚನಾ ವರ್ಮಾ ಐದನೇ ಸ್ಥಾನ ಗಳಿಸಿದ್ದು, 90,000 ಡಾಲರ್ (58.89 ಲಕ್ಷ ರೂ.ಗಳು) ನಗದು ಬಹುಮಾನ ಪಡೆದಿದ್ದಾರೆ. ಸೌರಶಕ್ತಿಯನ್ನು ಉತ್ಪಾದಿಸಬಹುದಾದ ಕಿಟಕಿಗಳಿಗೆ ಕಾರಣವಾಗುವ ಸಂಶೋಧನೆಗಾಗಿ ಈ ಪ್ರತಸ್ತಿ ಲಭಿಸಿದೆ.   ಅಲ್ಲದೇ ಪ್ರತೀಕ್ ನಾಯ್ಡು (ಜೀನೋಮ್ ಮತ್ತು ಕ್ಯಾನ್ಸರ್ ಚಿಕಿತ್ಸೆ ಅಧ್ಯಯನ) ಹಾಗೂ ವೃಂದಾ ಮದನ್ (ಮಲೇರಿಯಾ ಚಿಕಿತ್ಸೆ ಸಂಶೋಧನೆ) ಕ್ರಮವಾಗಿ ಏಳು ಮತ್ತು ಒಂಭತ್ತನೇ ಸ್ಥಾನ ಪಡೆದಿದ್ದು, 50,000 ಡಾಲರ್ ಬಹುಮಾನ ಪಡೆದಿದ್ದಾರೆ. ಅಂತಿಮ ಸುತ್ತಿಗೆ ಬಂದ 40 ವಿದ್ಯಾರ್ಥಿಗಳಲ್ಲಿ ಭಾರತೀಯ ಮೂಲದ ಇತರ ಎಂಟು ವಿದ್ಯಾರ್ಥಿಗಳು ತಲಾ 25,000 ಡಾಲರ್ ನಗದು ಬಹುಮಾನ ಗೆದ್ದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin