ಜ್ವರದಿಂದ ಬಳಲುತ್ತಿರುವ ಕೆ.ಎಲ್.ರಾಹುಲ್ ಲಂಕಾ ವಿರುದ್ಧ ಮೊದಲ ಟೆಸ್ಟ್ ಗೆ ಅಲಭ್ಯ

ಈ ಸುದ್ದಿಯನ್ನು ಶೇರ್ ಮಾಡಿ

KL
ಗಾಲೆ, ಜು.24- ನಾಲ್ಕು ತಿಂಗಳ ಕ್ರಿಕೆಟ್ ಅಂಗಳದಿಂದ ದೂರ ಉಳಿದಿದ್ದ ಕರ್ನಾಟಕದ ಭರವಸೆಯ ಆಟಗಾರ ಕೆ.ಎಲ್.ರಾಹುಲ್ ಅವರು ಜುಲೈ 26 ರಿಂದ ಶ್ರೀಲಂಕಾ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ನಿಂದ ಹೊರಗುಳಿಯಲಿದ್ದಾರೆ.  ಶ್ರೀಲಂಕಾ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ (54) ಗಳಿಸಿದ್ದ ರಾಹುಲ್ ಜ್ವರದಿಂದ ಬಳಲುತ್ತಿದ್ದು ಮೊದಲ ಟೆಸ್ಟ್‍ನಿಂದ ಹೊರಗುಳಿಯಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ.  ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‍ನ ವೇಳೆ ಭುಜದ ನೋವಿನಿಂದ ಹೊರಗುಳಿದಿದ್ದ ರಾಹುಲ್ ನಂತರ ಐಪಿಎಲ್‍ನಿಂದಲೂ ದೂರ ಉಳಿದಿದ್ದರಾದರೂ ಶ್ರೀಲಂಕಾ ವಿರುದ್ಧ ಆಡುವ ಉತ್ಸಾಹವನ್ನು ರಾಹುಲ್ ವ್ಯಕ್ತಪಡಿಸಿದ್ದರಾದರೂ ಈಗ ಅವರು ಜ್ವರದಿಂದ ಬಳಲುತ್ತಿರುವುದರಿಂದ ಲಂಕಾ ವಿರುದ್ಧ ಭಾರತ ಆಡಲಿರುವ 3 ಟೆಸ್ಟ್‍ಗಳ ಮೊದಲ ಟೆಸ್ಟ್‍ನಿಂದ ಹೊರಗುಳಿಯುವ ಅನಿವಾರ್ಯತೆ ಎದುರಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin