ಜ್ವಾಲಾಮುಖಿ ಸ್ಫೋಟ ಭೀತಿ ಹಿನ್ನೆಲೆಯಲ್ಲಿ 35,000 ಜನರ ಸ್ಥಳಾಂತರ

ಈ ಸುದ್ದಿಯನ್ನು ಶೇರ್ ಮಾಡಿ

Bali-volcano

ಕ್ಲುಂಗ್‍ಕುಂಗ್, ಸೆ.25-ಇಂಡೋನೇಷ್ಯಾದ ಮೌಂಟ್ ಅಗುಂಗ್ ಅಗ್ನಿ ಪರ್ವತ ಸಕ್ರಿಯವಾಗಿದ್ದು, ಜ್ವಾಲಾಮುಖಿ ಸ್ಫೋಟ ಭೀತಿಯಿಂದ ವಿಹಾರ ದ್ವೀಪ ಬಾಲಿ ಪ್ರದೇಶದಿಂದ 35,000ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಮೌಂಟ್ ಅಗುಂಗ್ ನಿನ್ನೆಯಿಂದ ಮತ್ತೆ ಕಂಪಿಸುತ್ತಿದ್ದು, ಪರ್ವತದ ಮಧ್ಯ ಭಾಗದ ಹಳ್ಳದಿಂದ ಹೊಗೆ ಕಾಣಿಸಿಕೊಂಡಿದೆ. ಜ್ವಾಲ್ವಾಮುಖಿ ಸದ್ಯದಲ್ಲೇ ಸಿಡಿಯುವ ಬಗ್ಗೆ ಮುನ್ಸೂಚನೆ ಇರುವುದರಿಂದ ಸುತ್ತಮುತ್ತಲ ಪ್ರವಾಸಿ ತಾಣಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಮುಂದುವರಿದಿದೆ. ಅಗ್ನಿಪರ್ವತದ ಸುತ್ತಮುತ್ತ 12 ಕಿ.ಮೀ. ವ್ಯಾಪ್ತಿ ಪ್ರದೇಶವನ್ನು ಅಪಾಯಕಾರಿ ವಲಯ ಎಂದು ಅಧಿಕಾರಿಗಳು ಘೋಷಿಸಿದ್ದಾರೆ.

Facebook Comments

Sri Raghav

Admin