ಜ.19ಕ್ಕೆ ಕಾಂಗ್ರೆಸ್ ಸೇರಲಿದ್ದಾರೆ ಸಿ.ಎಚ್.ವಿಜಯ್‍ಶಂಕರ್

ಈ ಸುದ್ದಿಯನ್ನು ಶೇರ್ ಮಾಡಿ

vijay-Shankar--02002

ಮೈಸೂರು,ಜ.12-ಇದೇ 19ರಂದು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದೇನೆ ಎಂದು ಮಾಜಿ ಸಂಸದ, ಬಿಜೆಪಿ ಮುಖಂಡ ಸಿ.ಎಚ್.ವಿಜಯ್‍ಶಂಕರ್ ಸ್ಪಷ್ಟಪಡಿಸಿದರು. ಇಂದು ಮೈಸೂರಿನ ಮುಖ್ಯಮಂತ್ರಿಗಳ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನೊಂದಿಗೆ ಸಾಕಷ್ಟು ಬೆಂಬಲಿಗರು ಕೂಡ ಅಂದು ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗುತ್ತೇನೆ ಎಂದರು. ಇಂದು ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದರು. ಜ.19ರಂದು ಪತ್ರಿಕಾಗೋಷ್ಠಿ ನಡೆಸಿ ನಾನು ಯಾಕಾಗಿ ಬಿಜೆಪಿ ತೊರೆಯುತ್ತಿದ್ದೇನೆ ಎಂಬುದನ್ನು ಸ್ಪಷ್ಟಪಡಿಸಲಿದ್ದೇನೆ. ನನಾಗಿರುವ ನೋವಿನ ಸಂಬಂಧ ಹಲವು ವಿಷಯಗಳನ್ನು ಬಹಿರಂಗಪಡಿಸುತ್ತೇನೆ, ಅಂದು ಕೆಲವರ ಮುಖವಾಡವನ್ನು ಬಯಲು ಮಾಡುತ್ತೇನೆ. ಹಲವರ ಬಂಡವಾಳ ಬಯಲಿಗೆ ತರುತ್ತೇನೆ ಎಂದರು.
ಹುಣಸೂರು ಕ್ಷೇತ್ರದಲ್ಲಿ ಸಕ್ರಿಯವಾಗಿದ್ದ ನನ್ನನ್ನು ಪಿರಿಯಾಪಟ್ಟಣದಿಂದ ಸ್ಪರ್ಧಿಸುವಂತೆ ತಿಳಿಸಿದ್ದರು. ಹಾಗಾಗಿ ನಾನು ಬೇಸರಗೊಂಡಿದ್ದೆ. ನನ್ನನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ಪಕ್ಷ ತೊರೆಯುತ್ತಿದ್ದೇನೆ. ಎಲ್ಲ ವಿವರಗಳನ್ನು 19ರಂದು ತಮಗೆ ನೀಡುತ್ತೇನೆ ಎಂದರು.

Facebook Comments

Sri Raghav

Admin