ಝಳಕಿ ಚೆಕ್‍ಪೋಸ್ಟ್ ಮೇಲೆ ಎಸಿಬಿ ದಾಳಿ, ಆರ್‌ಟಿಒ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Jalaki--01
ವಿಜಯಪುರ, ಮಾ.16- ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚು ರಾಜಸ್ವ ತಂದುಕೊಡುವ ಝಳಕಿ ಆರ್‍ಟಿಒ ಚೆಕ್‍ಪೋಸ್ಟ್ ಮೇಲೆ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರ್‍ಟಿಒ ಅಧಿಕಾರಿಯೊಬ್ಬರನ್ನು ವಶಕ್ಕೆ ಪಡೆಯಲಾಗಿದೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಝಳಕಿ ಸಮೀಪದ ಈ ಆರ್‍ಟಿಒ ಚೆಕ್‍ಪೋಸ್ಟ್ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಎಸ್‍ಪಿ ಅಮರನಾಥರೆಡ್ಡಿ ಅವರ ಮಾರ್ಗದರ್ಶನದಲ್ಲಿ ಡಿಎಸ್‍ಪಿ ಮಲ್ಲೇಶ್ ದೊಡಮನಿ ನೇತೃತ್ವದ ತಂಡ ದಾಳಿ ನಡೆಯಿತು.

ಚೆಕ್‍ಪೋಸ್ಟ್ ನಲ್ಲಿದ್ದ 25 ಸಾವಿರ ರೂ. ನಗದು ಮತ್ತು ಕೆಲವು ದಾಖಲಾತಿಗಳನ್ನು ವಶಪಡಿಸಿಕೊಂಡು ಕಚೇರಿಯನ್ನು ಅಧಿಕಾರಿಗಳು ಪರಿಶೀಲಿಸಿದರು. ಈ ವೇಳೆ ಮೋಟಾರ್ ವೆಹಿಕಲ್ ಇನ್ಸ್‍ಪೆಕ್ಟರ್ ರಂಜಿತ್ ಹಾಗೂ ಅಲ್ಲಿದ್ದ ಐದು ಮಂದಿ ಏಜೆಂಟ್‍ಗಳು, ಇಬ್ಬರು ಹೋಮ್‍ಗಾರ್ಡ್‍ಗಳನ್ನು ವಶಕ್ಕೆ ಪಡೆಯಲಾಗಿದೆ.
ಕಳೆದ ವರ್ಷ ಮಾ.7ರಂದು ಕೂಡ ಇದೇ ಚೆಕ್‍ಪೋಸ್ಟ್ ಮೇಲೆ ಎಸಿಬಿ ದಾಳಿ ನಡೆದಿದ್ದುದನ್ನು ಸ್ಮರಿಸಬಹುದು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin