ಝಾಕಿರ್‍ ಮುಸಾ ಹೊಸ ಉಗ್ರಗಾಮಿ ಸಂಘಟನೆ, ಐಎಸ್, ಅಲ್ ಖೈದಾ ಬೆಂಬಲ ಕೋರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Zakir-Musa--01

ಶ್ರೀನಗರ, ಮೇ 20-ಹಿಜ್‍ಬುಲ್ ಮುಜಹಿದ್ದೀನ್ (ಎಚ್‍ಎಂ) ಭಯೋತ್ಪಾದನೆ ಸಂಘಟನೆಯ ಕಮಾಂಡರ್ ಹುದ್ದೆ ತೊರೆದ ಕುಪ್ರಸಿದ್ಧ ಉಗ್ರಗಾಮಿ ಝಾಕಿರ್ ಮುಸಾ ಇದೀಗ ತನ್ನದೇ ಆದ ಭಯೋತ್ಪಾದಕರ ಬಣವನ್ನು ರೂಪಿಸುವುದಾಗಿ ಘೋಷಿಸಿದ್ದಾನೆ. ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಪಡೆದಿರುವ ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್ ಕೈದಾ ಬೆಂಬಲ ಕೋರುವುದಾಗಿಯೂ ಹೇಳಿದ್ದಾನೆ.ನಿನ್ನೆ ತಡರಾತ್ರಿ ಬಿಡುಗಡೆಯಾದ ಹೊಸ ವಿಡಿಯೋ ಟೇಪ್ ಈತ ಈ ವಿಷಯಗಳನ್ನು ಬಹಿರಂಗಗೊಳಿಸಿದ್ದಾನೆ. ಕಾಶ್ಮೀರವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಲು ತಾವು ಜಿಹಾದ್ (ಧರ್ಮಯುದ್ಧ) ಮುಂದುವರಿಸುವುದಾಗಿಯೂ ಹೇಳಿಕೊಂಡಿದ್ದಾನೆ.ಕಾಶ್ಮೀರವನ್ನು ಇಸ್ಲಾಮಿಕ್ ರಾಜ್ಯವನ್ನಾಗಿ ಮಾಡಲು ಹುರಿಯತ್ ಕಾನ್ಫೆರನ್ಸ್‍ನ ಪ್ರತ್ಯೇಕತಾವಾದಿ ನಾಯಕರಿಂದ ಅಡ್ಡಿಯಾದಲ್ಲಿ ಅವರ ತಲೆಗಳನ್ನು ಕತ್ತರಿಸಿ ಹಾಕುವುದೇ ಒಳ್ಳೆಯದು ಎಂದು ಮುಸಾ ನೀಡಿದ್ದ ಹೇಳಿಕೆ ಹಿಜ್‍ಬುಲ್‍ನಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಹೇಳಿಕೆಗೆ ವ್ಯಾಪಕ ಟೀಕೆ-ಖಂಡನೆಗಳು ವ್ಯಕ್ತವಾದ ಬಳಿಕ ಮುಸಾ ಕಮಾಂಡರ್ ಹುದ್ದೆ ತ್ಯಜಿಸಿದ್ದ. ಕಾಶ್ಮೀರದಲ್ಲಿ ತಮ್ಮ ಹೆಸರನ್ನು ಹೇಳಿಕೊಂಡು ದೇಣಿಗೆ ಸಂಗ್ರಹಿಸಲು ಬರುವವರಿಗೆ ಉತ್ತೇಜನ ನೀಡಬಾರದು. ಅಂಥವರು ನಮ್ಮ ಬಣದವರಲ್ಲ ಎಂದು ಆತ ತಿಳಿಸಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin