ಝಾಕಿರ್ ನಾಯ್ಕ್ ಮಲೇಷ್ಯಾದ ಶಾಶ್ವತ ನಿವಾಸಿ

ಈ ಸುದ್ದಿಯನ್ನು ಶೇರ್ ಮಾಡಿ

Zakir-Naik

ಪುತ್ರಜಯ (ಮಲೇಷ್ಯಾ), ಏ.19- ವಿವಾದಾತ್ಮಕ ಮುಸ್ಲಿಂ ಧರ್ಮ ಪ್ರಚಾರಕ ಹಾಗೂ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ (ಐಆರ್‍ಎಫ್) ಅಧ್ಯಕ್ಷ ಡಾ. ಝಾಕಿರ್ ನಾಯ್ಕ್ ಮಲೇಷ್ಯಾದ ಶಾಶ್ವತ ನಿವಾಸಿ (ಪರ್ಮನೆಂಟ್ ಸ್ಟೇಟಸ್-ಪಿಆರ್) ಸ್ಥಾನಮಾನ ಹೊಂದಿರುವ ಪ್ರಕರಣ ಬೆಳಕಿಗೆ ಬಂದಿದೆ. ಐದು ವರ್ಷಗಳ ಹಿಂದೆಯೇ ಝಾಕಿರ್‍ಗೆ ಪಿಆರ್ ಸೌಲಭ್ಯ ಲಭಿಸಿದೆ.  ಮಲೇಷ್ಯಾ ಉಪ ಪ್ರಧಾನಿ ಡಾ. ಅಹಮದ್ ಜಹೀದ್ ಹಮಿದಿ ಈ ವಿಷಯ ಖಚಿತಪಡಿಸಿದ್ದಾರೆ. ಇದರೊಂದಿಗೆ ಭಾರತ, ಮಲೇಷ್ಯಾ ಸೇರಿದಂತೆ ಇನ್ನೂ ಅನೇಕ ರಾಷ್ಟ್ರಗಳಲ್ಲಿ ಈತ ಪಿಆರ್ ಸ್ಥಾನ ಹೊಂದಿರುವುದು ಬಹಿರಂಗವಾಗುತ್ತಿದೆ.ಝಾಕಿರ್ ಮಲೇಷ್ಯಾದ ಪಿಆರ್. ಆದರೆ ಧರ್ಮ ಪ್ರಚಾರಕ ಈ ದೇಶದ ಪ್ರಜೆ ಅಲ್ಲ. ಆತ ಇತರ ದೇಶಗಳಲ್ಲೂ ಶಾಶ್ವತ ನಿವಾಸಿ ಸೌಲಭ್ಯ ಪಡೆದಿದ್ದಾನೆ ಎಂದು ಅವರು ತಿಳಿಸಿದ್ದಾರೆ. ಮಲೇಷ್ಯಾದ ಪುತ್ರಜಯ ನಗರದಲ್ಲಿ 2013ರಲ್ಲಿ ಝಾಕಿರ್‍ಗೆ ಟೊಕ್ಹೋ ಮಾಲ್ ಹಿಜ್‍ರಾಹ್ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ನಾಯ್ಕ್‍ಗೆ ಮಲೇಷ್ಯಾ ಪೌರತ್ವ ನೀಡಲಾಗಿದೆ ಎಂದು ಭಾರತದ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಇತ್ತೀಚೆಗಷ್ಟೇ ಈ ವರದಿಯನ್ನು ಕೇಂದ್ರ ಗೃಹ ಸಚಿವಾಲಯ ತಳ್ಳಿ ಹಾಕಿತ್ತು. ಈಗ ಗೃಹ ಸಚಿವರೂ ಆದ ಮಲೇಷ್ಯಾ ಉಪ ಪ್ರಧಾನಿಯೇ ಇದನ್ನು ಖಚಿತಪಡಿಸಿದ್ದಾರೆ.

ಮತಾಂತರ ಮತ್ತು ಕೋಮು ಭಾವನೆಗಳನ್ನು ಕೆರಳಿಸುತ್ತಿದೆ ಎಂಬ ಆರೋಪದ ಮೇಲೆ ಝಾಕಿರ್ ಮತ್ತು ಐಆರ್‍ಎಫ್ ವಿರುದ್ಧ ರಾóಷ್ಟ್ರೀಯ ತನಿಖಾ ಸಂಸ್ಥೆ-ಎನ್‍ಐಎ ಕ್ರಮ ಕೈಗೊಂಡಿದೆ. ವಿಚಾರಣೆಗೆ ಹಾಜರಾಗದಿದ್ದರೆ ಸೌದಿ ಅರೇಬಿಯಾ ಹೊರಗೆ ಆತನ ಚಲನವಲನವನ್ನು ತಡೆಯಲು ರೆಡ್ ಕಾರ್ನರ್ ನೋಟಿಸ್ ನೀಡುವಂತೆ ಎನ್‍ಐಎ ಇಂಟರ್‍ಪೋಲ್‍ಗೆ ಈಗಾಗಲೇ ಮನವಿ ಮಾಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin