ಟರ್ಕಿಯಲ್ಲಿ 12 ಸಾವಿರ ಪೊಲೀಸ್ ಅಧಿಕಾರಿಗಳ ಸಸ್ಪೆಂಡ್

ಈ ಸುದ್ದಿಯನ್ನು ಶೇರ್ ಮಾಡಿ

Turcky

ಅಂಕಾರಾ, ಅ.4– ಟರ್ಕಿಯಲ್ಲಿ ನಡೆದ ಕ್ಷಿಪ್ರ ಕ್ರಾಂತಿ ಹಿನ್ನೆಲೆಯಲ್ಲಿ 12 ಸಾವಿರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಪೊಲೀಸ್ ಕೇಂದ್ರ ಕಚೇರಿ ತಿಳಿಸಿದೆ.
ಟರ್ಕಿಯಲ್ಲಿ ಜುಲೈನಲ್ಲಿ ನಡೆದ ಕ್ಷಿಪ್ರ ಕ್ರಾಂತಿಯ ರೂವಾರಿ ಮುಸ್ಲಿಂ ಧಾರ್ಮಿಕ ನಾಯಕ ಫತೇವುಲ್ಲಾ ಗುಲೇನ್ ಜತೆ ಸಂಪರ್ಕ ಹೊಂದಿದ್ದರೆನ್ನಲಾದ ಆರೋಪದ ಮೇಲೆ 12,801 ಪೊಲೀಸ್ ಅಧಿಕಾರಿಗಳನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಇವರಲ್ಲಿ 2523 ಮಂದಿ ಉನ್ನತ ಪೊಲೀಸ್ ಅಧಿಕಾರಿಗಳಾಗಿದ್ದಾರೆ.

ಕ್ಷಿಪ್ರಕ್ರಾಂತಿ ತನಿಖೆ ಮುಂದುವರಿಸಿರುವ ಟರ್ಕಿ ಆಡಳಿತವು ಅದರ ಒಂದು ಭಾಗವಾಗಿ ಭಾರೀ ಸಂಖ್ಯೆಯ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಕ್ಷಿಪ್ರಕ್ರಾಂತಿಗೆ ಕುಮ್ಮಕ್ಕು ನೀಡಿದವರಿಗೆ ದೊಡ್ಡಮಟ್ಟದಲ್ಲಿ ಬಿಸಿ ಮುಟ್ಟಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin