ಟರ್ಕಿಯ ಕಪ್ಪು ಸಮುದ್ರದಲ್ಲಿ ಮುಳುಗಿದ ರಷ್ಯಾ ನೌಕೆ, 78 ಮಂದಿ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Russianfhsdfh
ಇಸ್ತಾನ್‍ಬುಲ್, ಏ.28 – ಟರ್ಕಿಯ ಕಪ್ಪು ಸಮುದ್ರದಲ್ಲಿ ಜಾನುವಾರುಗಳನ್ನು ಒಯ್ಯುತ್ತಿದ್ದ ಹಡಗೊಂದಕ್ಕೆ ಡಿಕ್ಕಿಯಾಗಿ ರಷ್ಯಾದ ಬೇಹುಗಾರಿಕೆ ನೌಕೆ ಮುಳುಗಿದೆ. ಟರ್ಕಿ ಕರಾವಳಿ ಸುರಕ್ಷತಾ ಪ್ರಾಧಿಕಾರ ಈ ದುರ್ಘಟನೆಯನ್ನು ಖಚಿತಪಡಿಸಿದೆ. ನೌಕೆಯಲ್ಲಿದ್ದ ಎಲ್ಲ 78 ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಕರಾವಳಿ ಪ್ರದೇಶದಲ್ಲಿ ದಟ್ಟ ಮಂಜು ಆವರಿಸಿದ್ದರಿಂದ ಬೇಹುಗಾರಿಕೆ ನೌಕೆಯು ಕಾರ್ಗೋ ಹಡಗಿಗೆ ಅಪ್ಪಳಿಸಿತು. ಈ ಅಪಘಾತದಲ್ಲಿ ಜಾನುವಾರುಗಳನ್ನು ಒಯ್ಯುತ್ತಿದ್ದ ಹಡಗಿಗೂ ಹಾನಿಯಾಗಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin