ಟಾಟಾ ಏಸ್ ಉರುಳಿ ಇಬ್ಬರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

T-narasiputa-3

ಟಿ.ನರಸೀಪುರ,ಅ.25-ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ವಾಹನ ಉರುಳಿಬಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಟಿ.ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. ವಸಂತ(41) ಮತ್ತು ವಾಹನದ ಚಾಲಕ ನಾಗರಾಜು(43) ಮೃತಪಟ್ಟ ದುರ್ದೈವಿಗಳು. ಇಂದು ಮುಂಜಾನೆ ಬಣ್ಣದ ಕೆಲಸ (ಪೇಂಟಿಂಗ್) ಮಾಡಲು ತಲಕಾಡಿನಿಂದ ಎಂಟು ಮಂದಿ ಮೈಸೂರಿಗೆ ಟಾಟಾ ಏಸ್ ವಾಹನದಲ್ಲಿ ತೆರಳತ್ತಿದ್ದರು. ನಾಗರಾಜು ವಾಹನ ಚಾಲನೆ ಮಾಡುತ್ತಿದ್ದನು. ಅತಿ ವೇಗದಿಂದಾಗಿ ಟಿ.ನರಸೀಪುರ ತಾಲ್ಲೂಕಿನ ಮೈಸೂರು ರಸ್ತೆ, ಕೆಂಪಯ್ಯನ ಹುಂಡಿ ಸಮೀಪದ ಪೈಪ್ ಕಾರ್ಖಾನೆ ಬಳಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಉರುಳಿ ಬಿದ್ದಿದೆ. ಪರಿಣಾಮ ಚಾಲಕ ಹಾಗೂ ಮುಂಭಾಗದ ಸೀಟ್‍ನಲ್ಲಿದ್ದ ವಸಂತ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದು ಐದುಮಂದಿ ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin