ಟಿಕೆಟ್ ಹಗರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸೈಬರ್ ಭದ್ರತೆ ಹೆಚ್ಚಿಸಲು ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

Ticket--01

ನವದೆಹಲಿ, ಡಿ. 28-ಕೇಂದ್ರೀಯ ತನಿಖಾ ದಳ-ಸಿಬಿಐನಿಂದ ಟಿಕೆಟ್ ಹಗರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸೈಬರ್ ಭದ್ರತೆಯನ್ನು ಬಲಗೊಳಿಸುವಂತೆ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಭಾರತೀಯ ರೈಲ್ವೆ ಆತಿಥ್ಯ ಮತ್ತು ಪ್ರವಾಸೋದ್ಯಮ ನಿಗಮ(ಐಆರ್‍ಸಿಟಿಸಿ) ಮತ್ತು ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರ (ಸಿಆರ್‍ಐಎಸ್) ಈ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದಾರೆ.

ರೈಲ್ವೆ ಮುಂಗಡ ಕಾದಿರಿಸುವ ವ್ಯವಸ್ಥೆಯನ್ನು ಬದಲಿಸಲು ಅಕ್ರಮ ಸಾಫ್ಟ್‍ವೇರ್ ಅಭಿವೃದ್ದಿಗೊಳಿಸಿ ಆಪರೇಟ್ ಮಾಡುತ್ತಿದ್ದ ಆರೋಪದ ಮೇಲೆ ಸಿಬಿಐ ಮೊತ್ತ ಐಆರ್‍ಸಿಟಿಸಿ ಮಾಜಿ ಉದ್ಯೋಗಿ ಮತ್ತು ಸಾಫ್ಟ್‍ವೇರ್ ಪ್ರೋಗ್ರಾಮರ್ ಅಜಯ್ ಗರ್ಗ್ ಮತ್ತು ಅನಿಲ್ ಗುಪ್ತ ಎಂಬುವರನ್ನು ಬಂಧಿಸಿತ್ತು. ಆತನ ಬಂಧನದಿಂದ ಟಿಕೆಟ್ ಹಗರಣ ಬೆಳಕಿಗೆ ಬಂದಿತ್ತು. ಮೌಸ್‍ನಲ್ಲಿ ಏಕೈಕ ಕ್ಲಿಕ್ ಮಾಡುವ ಮೂಲಕ ನೂರಾರು ತಾತ್ಕಾಲ್ ಟಿಕೆಟ್‍ಗಳನ್ನು ಬುಕ್ ಮಾಡಲು ಏಜೆಂಟ್‍ಗಳಿಗೆ ಈ ಅಕ್ರಮ ಸಾಫ್ಟ್‍ವೇರ್ ಅವಕಾಶ ನೀಡುತ್ತಿತ್ತು.

Facebook Comments

Sri Raghav

Admin