ಟಿಪ್ಪರ್‍ಗೆ ಕಾರು ಡಿಕ್ಕಿ,ಶಿಕ್ಷಕಿ ಸಾವು : ಮಗು ಸೇರಿ ಮೂವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

deadly--accident
ಚಿಕ್ಕಮಗಳೂರು,ಅ.10- ನಿಂತಿದ್ದ ಟಿಪ್ಪರ್‍ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಶಿಕ್ಷಕಿಯೊಬ್ಬರು ಮೃತಪಟ್ಟು ಮೂವರು ಗಾಯಗೊಂಡಿರುವ ಘಟನೆ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ತುಮಕೂರಿನ ಸದಾಶಿವನಗರ ನಿವಾಸಿ ಕೊರಟಗೆರೆ ಉರ್ದು ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಯಾಸ್ಮಿನ್(32) ಮೃತಪಟ್ಟವರು.ಇವರು ನಿನ್ನೆ ಶೃಂಗೇರಿ ಸಮೀಪದ ಸಿರಿಮನೆ ಫಾಲ್ಸ್ ನೋಡಲು ಕುಟುಂಬ ಸಮೇತರಾಗಿ ಕಾರಿನಲ್ಲಿ ತೆರಳುತ್ತಿದ್ದರು. ಮಾರ್ಗ ಮಧ್ಯೆ ಬಾಳೆ ಹೊನ್ನೂರು ಕಡೆಗೆ ತೆರಳುವಾಗ ಭದ್ರ ಕಾಫಿಶಾಲ್ ಬಳಿ ಎದುರಿಗೆ ಬಂದ ಬಸ್‍ಗೆ ದಾರಿ ಬಿಡಲು ಯತ್ನಿಸಿ ಪಕ್ಕದಲ್ಲೇ ನಿಂತಿದ್ದ ಟಿಪ್ಪರ್‍ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಕಾರಿನಲ್ಲಿದ ಒಂದು ವರ್ಷದ ಇಫ್ರಾನ್ ಅಹಮದ್ ಸ್ಥಿತಿ ಚಿಂತಾಜನಕವಾಗಿದ್ದು, ಇನ್ನುಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯಳಗಾಗಿವೆ. ಈ ಮೂವರನ್ನು ಚಿಕ್ಕಿಮಗಳುರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಾಳೆಹೊನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

 

 

Facebook Comments

Sri Raghav

Admin