ಟಿಪ್ಪರ್ ಡಿಕ್ಕಿ : ವ್ಯಕ್ತಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

deadly--accident

ಕುಣಿಗಲ್,ನ.5-ತಾಯಿಯ ಉತ್ತರಕ್ರಿಯೆಗೆ ಆಹ್ವಾನಿಸಿ ಬೈಕ್‍ನಲ್ಲಿ ಹಿಂದಿರುಗುತ್ತಿರುವಾಗ ಟಿಪ್ಪರ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಳೆಯೂರು ಗ್ರಾಮದ ನಿವಾಸಿ ಸುರೇಶ್(40) ಮೃತಪಟ್ಟ ದುರ್ದೈವಿ. ತಾಯಿ ಕೆಲವು ದಿನಗಳ ಹಿಂದೆ ಮೃತಪಟ್ಟಿದ್ದು , ನಿನ್ನೆ ಸಂಜೆ ತಾಯಿಯ ಉತ್ತರಕ್ರಿಯೆಗೆ ಆಹ್ವಾನಿಸಲು ಮಡದಿಯ ತವರೂರಾದ ಕಾಚಿಹಳ್ಳಿಗೆ ತೆರಳಿ ವಾಪಸ್ಸಾಗುತ್ತಿದ್ದಾಗ ಹುಲಿಯೂರು ದುರ್ಗ ಹೊರವಲಯದಲ್ಲಿರುವ ಇಟ್ಟಿಗೆ ಕಾರ್ಖಾನೆ ಬಳಿ ಅತಿವೇಗವಾಗಿ ಬಂದ ಟಿಪ್ಪರ್ ಬೈಕ್‍ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‍ಐ ಅನಿಲ್‍ಕುಮಾರ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin