ಟಿಪ್ಪು ಜಯಂತಿ ಆಚರಣೆಗೆ ಸರ್ಕಾರ ನಿರ್ಬಂಧ ಹೇರುವುದು ಸರಿಯಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

trvekere

ತುರುವೇಕೆರೆ, ನ.7-ಮುಸ್ಲಿಂ ಬಾಂಧವರು ಟಿಪ್ಪು ಜಯಂತಿಯನ್ನು ಆಚರಿಸಲು ಸರ್ಕಾರದಿಂದ ಯಾವುದೇ ನಿರ್ಬಂಧ ವಿಧಿಸದೆ ಅದ್ದೂರಿಯಾಗಿ ಆಚರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯಿಸಿದರು.ಮುಸ್ಲಿಂ ಮುಖಂಡರ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು ನಂತರ ಪರ್ತಕರ್ತರೊಂದಿಗೆ ಮಾತನಾಡಿ, ಕಳೆದ ವರ್ಷದಿಂದ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತಿರುವುದನ್ನು ಸ್ವಾಗತಿಸುತ್ತೇನೆ. ಆದರೆ ಟಿಪ್ಪು ಜಯಂತಿ ಆಚರಿಸಲು ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಪೊಲೀಸರು ಹೇಳಿದಂತೆ ಕಚೇರಿಯಲ್ಲಿ ಆಚರಿಸಬಹುದು ಯಾವುದೇ ಮೆರವಣಿಗೆ ಸಭೆ ಸಮಾರಂಭವನ್ನು ಮಾಡದಂತೆ ಮುಸ್ಲಿಂ ಮುಖಂಡರಿಗೆ ಸೂಚಿಸಿದ್ದಾರೆ. ಒಂದು ಕಡೆ ಟಿಪ್ಪು ಜಯಂತಿ ಮಾಡಲು ಆದೇಶ ನೀಡಿ ಇನ್ನೊಂದು ಕಡೆ ಅದ್ದೂರಿಯಾಗಿ ಆಚರಿಸದಂತೆ ನಿರ್ಬಂಧ ಹೇರಿರುವುದು ಸರಿಯಲ್ಲ ಎಂದು ಹೇಳಿದರು.

ಬಸವ ಜಯಂತಿ, ಗಾಂಧಿಜಯಂತಿ, ವಾಲ್ಮೀಕಿ ಜಯಂತಿ, ಕನಕ ಜಯಂತಿ, ಅಂಬೇಡ್ಕರ್ ಜಯಂತಿಗಳನ್ನು ಆಚರಿಸಿಕೊಂಡು ಬರುವಂತೆ ಮುಸ್ಲಿಂ ಮುಖಂಡರು ಟಿಪ್ಪು ಜಯಂತಿ ಮುಕ್ತವಾಗಿ ಆಚರಿಸಲು ಸರ್ಕಾರ , ಬಿಜೆಪಿ ಹಾಗೂ ಆರ್‍ಎಸ್‍ಎಸ್ ಮುಖಂಡರು ಯಾವುದೇ ಅಡಚಣೆ ಮಾಡಬಾರದು ಬಿಎಸ್‍ವೈ ಅವರು ಕೆಜೆಪಿ ಪಕ್ಷದಲ್ಲಿದ್ದಾಗ ಟಿಪ್ಪು ಜಯಂತಿಯನ್ನು ಬೆಂಬಲಿಸಿದ್ದರು ಆದರೆ ಬಿಜೆಪಿಗೆ ಸೇರಿದ್ದರಿಂದ ಟಿಪ್ಪು ಜಯಂತಿ ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು. ಟಿಪ್ಪು ಜಯಂತಿಯಂದು ಪಟ್ಟಣದ ಪ್ರವಾಸಿ ಮಂದಿರದಿಂದ ಪಟ್ಟಣದ ಹಿರಣ್ಣಯ್ಯ ಬಯಲುರಂಗ ಮಂದಿರದವರಗೆ ಮೆರವಣಿಗೆ ನಡೆಯಲಿದ್ದು, ಈ ಮೆರವಣಿಗೆಯ ನೇತೃತ್ವವನ್ನು ನಾನೇ ವಹಿಸುತ್ತೇನೆ. ಬಿಜೆಪಿ ಹಾಗೂ ಭಜರಂಗದಳದ ಕಾರ್ಯಕರ್ತರು ಗೊಂದಲ ಸೃಷ್ಟಿ ಮಾಡದೆ, ಸಂಘರ್ಷಕ್ಕೆ ಎಡೆ ಮಾಡಿಕೊಡದೆ ಟಿಪ್ಪು ಜಯಂತಿಗೆ ಅಡಚಣೆ ಮಾಡದಂತೆ ಮನವಿ ಮಾಡಿದರು. ಜೆಡಿಎಸ್ ಅಲ್ಪಸಂಖ್ಯಾಂತರ ಅಧ್ಯಕ್ಷ ಜಪ್ರುಲಾ ಖಾನ್, ಮುಸ್ಲಿಂ ಮುಖಂಡರಾದ ನಯಾಜ್, ಯೂಸುಪ್, ಅಬ್ಜಲ್ ಪಾಷ ಸೇರಿದಂತೆ ಮುಸ್ಲಿಂ ಮುಖಂಡರು ಇದ್ದರು.

► Follow us on –  Facebook / Twitter  / Google+

Facebook Comments

Sri Raghav

Admin