ಟಿಪ್ಪು ಜಯಂತಿ ವೇಳೆ ರಾಜ್ಯದ ಹಲವೆಡೆ ಕೋಮುಗಲಭೆ ಸಾಧ್ಯತೆ : ಹೈ ಅಲರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Tippu-Jayanthi

ಬೆಂಗಳೂರು,ನ.7-ಹಿಂದೂಪರ ಸಂಘಟನೆಗಳ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿರುವ ಟಿಪ್ಪು ಜಯಂತಿ ವೇಳೆ ರಾಜ್ಯದ ಕೆಲವು ಕಡೆ ಕೋಮುಗಲಭೆಯಾಗುವ ಸಂಭವವಿದೆ ಎಂದು ಗುಪ್ತಚರ ವಿಭಾಗ ವರದಿ ನೀಡಿದೆ.  ಗುಪ್ತಚರ ವಿಭಾಗದ ಎಡಿಜಿಪಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಪ್ರತ್ಯೇಕ ವರದಿ ನೀಡಿದ್ದು , ರಾಜ್ಯದ ಕೆಲವು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಗಲಭೆ ನಡೆಯುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿ ಮಡಿಕೇರಿಯಲ್ಲಿ ಟಿಪ್ಪು ಜಯಂತಿ ವಿರೋಧಿಸಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಈ ಬಾರಿ ಕೊಡಗಿನಲ್ಲಿ ಗಲಭೆ ನಡೆಯುವ ಸಾಧ್ಯತೆಗಳಿಲ್ಲ ಬದಲಿಗೆ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ , ಚಿತ್ರದುರ್ಗ, ಕಲ್ಬುರ್ಗಿ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ಕೋಲಾರ ಜಿಲ್ಲೆಯ ಚಿಂತಾಮಣಿ, ಚಿಕ್ಕಮಗಳೂರು ಮತ್ತಿತರ ಕಡೆ ಗಲಭೆ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಗುಪ್ತಚರ ವಿಭಾಗದ ಅಧಿಕಾರಿಗಳು ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.

ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ದ ಹೋರಾಟ ಮಾಡಿದ್ದ ಎಂಬುದಕ್ಕಿಂತ ಆತ ಹಿಂದುಗಳ ನರಹತ್ಯೆ, ಮಠ ಮಂದಿರಗಳನ್ನು ನಾಶಪಡಿಸಿರುವುದು ಮತ್ತು ಮತಾಂತರಕ್ಕೆ ಕುಮ್ಮಕ್ಕು ನೀಡಿದ್ದ ಎಂಬುದನ್ನು ಕೆಲವು ಸಂಘಟನೆಗಳು ಜನರ ಮನಸಿಗೆ ತಾಕುವಂತೆ ಮಾಡಿವೆ. ಇದರ ಪರಿಣಾಮ ಟಿಪ್ಪು ವಿರುದ್ದ ಈವರೆಗೂ ಇದ್ದ ಒಳ್ಳೆಯ ಭಾವನೆ ಬದಲಾಗಿದೆ. ಆತ ಒಬ್ಬ ಕ್ರೂರಿ ಎಂದು ಬಿಂಬಿಸುತ್ತಿರುವುದರಿಂದ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತವಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಟಿಪ್ಪು ಜಯಂತಿಯನ್ನು ವಿರೋಧಿಸಲು ಹಿಂದೂಸಂಘಟನೆಗಳು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದು ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಯಿದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿಭದ್ರತೆಗಾಗಿ ಹೆಚ್ಚಿನ ಅರಸೇನಾಪಡೆಯನ್ನು ನಿಯೋಜಿಸುವಂತೆ ಮನವಿ ಮಾಡಲಾಗಿದೆ.

ಸಮಾಜಘಾತುಕ ಶಕ್ತಿಗಳು ವಶಕ್ಕೆ:

ಗುಪ್ತಚರ ವಿಭಾಗದ ಅಧಿಕಾರಿಗಳು ವರದಿ ನೀಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಕೋಮುಗಲಭೆ ಸೃಷ್ಟಿಸಲು ಯತ್ನಿಸುತ್ತಿರುವ ಕೆಲವು ಸಮಾಜ ಘಾತುಕ ಶಕ್ತಿಗಳನ್ನು ಈಗಾಗಲೇ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.  ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಕಲಬುರಗಿ, ಹುಬ್ಬಳ್ಳಿ ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯದ ಅನೇಕ ಕಡೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸಮಾಜಘಾತುಕ ಶಕ್ತಿಗಳನ್ನು ಮುಂಜಾಗ್ರತವಾಗಿಯೇ ಬಂಧಿಸಲಾಗಿದೆ.
ಇದರ ಜೊತೆಗೆ ಕೆಲವು ಸಂಘಟನೆಗಳ ಮುಖಂಡರನ್ನು ಸಹ ಯಾವುದೇ ಸಂದರ್ಭದಲ್ಲೂ ಬಂಧಿಸುವ ಸಾಧ್ಯತೆಯಿದೆ. ಕೋಮುಗಲಭೆ ನಡೆಯುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಕಡೆ ಈಗಾಗಲೇ ಕೇಂದ್ರದ ಅರಸೇನಾ ಪಡೆಯನ್ನು ನಿಯೋಜನೆ ಮಾಡಲಾಗಿದೆ.  ಇನ್ನು ಪೊಲೀಸರು ಕೂಡ ತಮ್ಮ ತಮ್ಮ ವ್ಯಾಪ್ತಿಯ ಪೆÇಲೀಸ್ ಠಾಣೆಗಳಲ್ಲಿ ಠಿಕಾಣಿ ಹೂಡುವಂತೆ ಸೂಚಿಸಲಾಗಿದೆ. ಯಾವುದೇ ಸಿಬ್ಬಂದಿಗೆ ರಜೆ ಕೊಡದಂತೆ ಪ್ರತಿಯೊಬ್ಬರು ಕರ್ತವ್ಯಕ್ಕೆ ಹಾಜರಾಗುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಹೈಅಲರ್ಟ್:

ಕರಾವಳಿ ತೀರಾಪ್ರದೇಶ, ಮಲೆನಾಡು, ಮಧ್ಯಕರ್ನಾಟಕ, ಬಯಲುಸೀಮೆ, ಮುಂಬೈ ಮತ್ತು ಹೈದರಾಬಾದ್ ಕರ್ನಾಟಕ ಸೇರಿದಂತೆ ಮತ್ತಿತರ ಕಡೆ ಬಿಗಿಭದ್ರತೆಯನ್ನು ಹೆಚ್ಚಿಸಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ.  ಕಳೆದ ಬಾರಿ ತುಸು ನಿರ್ಲಕ್ಷ ವಹಿಸಿದ್ದರಿಂದ ದೊಡ್ಡ ಮಟ್ಟದಲ್ಲಿ ಕೋಮುಗಲಭೆಯಾಯಿತು. ಇದರಿಂದ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿತ್ತು. ಹೀಗಾಗಿ ಈ ಬಾರಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.  ಈಗಾಗಲೇ ಕೇಂದ್ರದಿಂದ ಅರಸೇನಾ ಪಡೆ ನಿಯೋಜಿಸಲಾಗಿದ್ದು , ಕೆಎಸ್‍ಆರ್‍ಪಿ ತುಕಡಿಯೂ ಭದ್ರತೆಗೆ ಸರ್ವ ಸನ್ನದ್ಧವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin