ಟಿಪ್ಪು ಮತಾಂಧನೆಂಬ ಚಿಮೂ ಅವರ ಹೇಳಿಕೆ ಸುಳ್ಳು : ಪಾಪು

ಈ ಸುದ್ದಿಯನ್ನು ಶೇರ್ ಮಾಡಿ

Patil-Puttappa--01

ದಾವಣಗೆರೆ,ಆ.20-ಟಿಪ್ಪುಸುಲ್ತಾನ್ ಒಬ್ಬ ಮತಾಂಧ. ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದ ಎಂದು ಸಂಶೋಧಕ ಚಿದಾನಂದ ಮೂರ್ತಿ ಅವರು ಬರೆದಿರುವುದು ಅಪ್ಪಟ್ಟ ಸುಳ್ಳು ಎಂದು ಹಿರಿಯ ಸಾಹಿತಿ ಪಾಟೀಲ ಪುಟ್ಟಪ್ಪ ಹೇಳಿದ್ದಾರೆ. ನಗರದ ಕುವೆಂಪು ಕಲಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ತನ್ನ ಆಡಳಿತ ಅವಧಿಯಲ್ಲಿ ಮಾಡಿರುವ ಉತ್ತಮ ಕೆಲಸಗಳನ್ನು ಚಿದಾನಂದ ಮೂರ್ತಿ ಮರೆಮಾಚಿದ್ದಾರೆ ಎಂದರು.

ಟಿಪ್ಪು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ರಾಜ್ಯದ ಹಿತಕ್ಕಾಗಿ ಹೋರಾಟ, ಬ್ರಿಟಿಷರ ವಿರುದ್ಧ ಹೋರಾಟ, ಆತನ ಆಡಳಿತಾವಧಿಯಲ್ಲಿ ಮದ್ಯಪಾನ ನಿಷೇಧ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಸುಂದರ ಲಾಲ್‍ಬಾಗ್ ನಿರ್ಮಾಣ, ಮೈಸೂರು ರೇಷ್ಮೆ ಪರಿಚಯಿಸಿದ್ದು ಕೂಡ ಟಿಪ್ಪು ಸುಲ್ತಾನ್. ಮುಸ್ಲಿಂ ಎಂಬ ಕಾರಣಕ್ಕೆ ಟಿಪ್ಪು ಜಯಂತಿ ಆಚರಣೆಯಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಹೇಳಿದರು.

ಬ್ರಿಟಿಷರ ವಿರುದ್ಧ ಹೋರಾಡಿ ಮರಣ ಹೊಂದಿದ ಟಿಪ್ಪುವಿನ ಅಂತ್ಯಸಂಸ್ಕಾರ ಸಂದರ್ಭದಲ್ಲಿ ಸೇರಿದ ಹಿಂದೂ ಮತ್ತು ಮುಸ್ಲಿಂ ಜನಸಮೂಹ ಕಂಡು ಅಂದಿನ ಬ್ರಿಟಿಷ್ ಗವರ್ನರ್ ಲಾರ್ಡ್ ವೆಲ್ಲೆಸ್ಲಿ ಬೆರೆಗಾಗಿದ್ದ. ಅಷ್ಟು ಜನಪ್ರಿಯತೆ ಪಡೆದ ಟಿಪ್ಪು ವಿರುದ್ಧ ಅನಗತ್ಯ ಆರೋಪ ಮಾಡುವುದು ಸಮಜಂಸವಲ್ಲ ಎಂದು ಅವರು ಹೇಳಿದರು.

Facebook Comments

Sri Raghav

Admin