ಟಿಸಿಪಿ ಬಡಾವಣೆಯಲ್ಲಿ ಸ್ಮಶಾನ ಜಾಗ ನಿಗದಿಗೆ ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

anekal

ಆನೇಕಲ್, ಮೇ. 17- ಚಂದಾಪುರ ಪುರಸಭಾ ವ್ಯಾಪ್ತಿಯ ಟಿ.ಸಿ.ಪಿ ಬಡಾವಣೆಯ ಸಮೀಪದಲ್ಲಿರುವ ಸ್ಮಶಾನ ಜಾಗವನ್ನು ಸಾರ್ವಜನಿಕರ ಸ್ಮಶಾನಕ್ಕೆ ನಿಗದಿಪಡಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು. ಪರಂಪರೆಯಿಂದ ಹಳೇ ಚಂದಾಪುರ ಹಾಗೂ ಚಂದಾಪುರ ಗ್ರಾಮಸ್ಥರು ಇಂದಿಗೂ ಸಹ ಈ ಜಾಗವನ್ನು ಸ್ಮಶಾನಕ್ಕಾಗಿ ಉಪಯೋಗ ಮಾಡಿಕೊಂಡು ಬರುತ್ತಿರುವುದು ಕಾಣಬಹುದಾಗಿದೆ ಆದರೆ ಈ ಭಾಗದಲ್ಲಿ ಜಮೀನಿನ ಬೆಲೆ ಏರಿಕೆ ಗೊಂಡತೆ ಪ್ರಭಾವಿಗಳ ಕಣ್ಣು ಈ ಜಮೀನಿನ ಮೇಲೆ ಬಿದ್ದು, ಇಂದು ಈ ಜಾಗ ಹಲವು ವಿಭಾಗಗಳಾಗಿ ವಿಂಗಡನೆಗಳಾಗಿ ಹೋಗಿದೆ ಎಂದರು.

ಚಂದಾಪುರ ಪುರಸಭೆಯ ಜನಸಂಖ್ಯೆ 1ಲಕ್ಷಕ್ಕೂ ಹೆಚ್ಚು ಮೀರಿದೆ, ಸತ್ತವರನ್ನು ಭೂಮಿಯಲ್ಲಿ ಹೂಳುವುದಕ್ಕೆ ಜಾಗವಿಲ್ಲದೆ ಸಾರ್ವಜನಿಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನೋವನ್ನು ವ್ಯಕ್ತ ಪಡಿಸಿದರು.  ಸರ್ವೇ 71ರಲ್ಲಿ 8 ಏಕರೆ 16 ಗುಂಟೆ ಜಮೀನು ಈ ಹಿಂದೆ ಈ ಜಮೀನು ಕೆರೆಯಾಗಿತ್ತು, ಭೂಮಾಪೀಯದವರ ಹಣದ ಆಸೆಗೆ ಬಲಿಯಾದ ಕೆಲವು ಅಧಿಕಾರಿಗಳು ಈ ಸ್ವತ್ತಿಗೆ ಅಕ್ರಮ ದಾಖಲಾತಿಗಳನ್ನು ಸೃಷ್ಠಿ ಮಾಡಿಕೊಟ್ಟಿರುವುದು ಮೇಲ್ ನೋಟಕ್ಕೆ ಕಾಣುತ್ತದೆ ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಜೊತೆಗೆ ಸಾರ್ವಜನಿಕರ ಸ್ಮಶಾನಕ್ಕೆ ಈ ಜಾಗವನ್ನು ನಿಗದಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin