ಟೀಚರ್ಸ್ ಕಾಲೋನಿ ಅಭಿವೃದ್ಧಿಗೆ 50 ಲಕ್ಷ ಬಿಡುಗಡೆ
ಈ ಸುದ್ದಿಯನ್ನು ಶೇರ್ ಮಾಡಿ
ನಂಜನಗೂಡು, ಫೆ.4-ಟೀಚರ್ಸ್ ಕಾಲೋನಿಯ ಅಭಿವೃದ್ದಿಗಾಗಿ 50 ಲಕ್ಷ ವಿನಿಯೋಗಿಸಲಾಗುತ್ತಿದ್ದು, ಇದರಲ್ಲಿ ಕಾಲೋನಿಯ ಚರಂಡಿ ಮತ್ತು ರಸ್ತೆಗಳ ಅಭಿವೃದ್ಧಿ ಪಡಿಸಲಾಗುವುದು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಅನುಸೂಯ ಗಣೇಶ ತಿಳಿಸಿದರು.ಚರಂಡಿ ಮತ್ತು ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಬಂದ 1 ಕೋಟಿ ರೂ. ಹಣದ ಮೊದಲ ಕಂತು 50 ಲಕ್ಷ ರೂ.ಗಳನ್ನು ಮೊದಲ ಕಂತಿನಲ್ಲಿ ನೀಡಲಾಗಿದ್ದು , ಅಭಿವೃದ್ಧಿ ಪಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಿವಾಸಿಗಳಾದ ನಾಗಣ್ಣಚಾರ್, ಗುರುಸ್ವಾಮಿ, ನಾಗೇಶ, ಸುರೇಶ, ನಾಗಣ್ಣ, ರಾಜು ಮುಂತಾದವರು ಭಾಗವಹಿಸಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments