ಟೀಮ್ ಇಂಡಿಯಾ ಕೋಚ್‌ ಸ್ಥಾನಕ್ಕೆ ಕುಂಬ್ಳೆ ರಾಜೀನಾಮೆ

ಈ ಸುದ್ದಿಯನ್ನು ಶೇರ್ ಮಾಡಿ

Anil-Kumble

ನವದೆಹಲಿ, ಜೂ.20 : “ಟೀಮ್ ಇಂಡಿಯಾ ” ಕೋಚ್‌ ನ ಸ್ಥಾನಕ್ಕೆ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ್ದಾರೆ. ಬಿಸಿಸಿಐನ ಸಲಹ ಸಮಿತಿಯ ಸದಸ್ಯರುಗಳಾದ ಸಚಿನ್‌, ಲಕ್ಷ್ಮಣ್, ಇನ್ನಿತರೆ ಸದಸ್ಯರು ಗಳು ಮನವೊಲಿಸಿದರು ಸಹ ಅನಿಲ್ ಕುಂಬ್ಳೆ ಯವರು ಅವರ ಮಾತನ್ನು ನಮ್ರತೆಯಿಂದ ತಳ್ಳಿ ಹಾಕಿ ರಾಜೀನಾಮೆ ನೀಡಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುಂಚಿತವಾಗಿ ಕೋಚ್ ಅನಿಲ್ ಕುಂಬ್ಳೆ ಹಾಗೂ ನಾಯಕ ವಿರಾಟ್ ಕೊಹ್ಲಿ ನಡುವೆ ಮುಸುಕಿನ ಗುದ್ದಾಟ ತಾರಕಕ್ಕೇರಿತ್ತು.

ಇತ್ತೀಚೆಗೆ ನಡೆದ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಪೈನಲ್ ನಲ್ಲಿ ಟಾಸ್ ಗೆದ್ದರು ಸಹ ನೆಮ್ಮದಿಯಿಂದ ಯಾವುದೇ ಆತಂಕವಿಲ್ಲದೆ ಭಜ೯ರಿ ಬ್ಯಾಟಿಂಗ್ ಮಾಡಿ ಉತ್ತಮ ಮೊತ್ತವನ್ನು ಕೂಡಿಹಾಕಬಹುದಿತ್ತು. ಆದರೆ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಸೋಲಿಗೆ ಕಾರಣರಾದರೆಂದು ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳು ಟೀಕಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಯವರ ದುರಾಂಕಾರದ ನಡೆ ,ಅತಿಯಾದ ನಂಬಿಕೆ ಭಾರತವನ್ನು ಸೋಲುವಂತೆ ಮಾಡಿತು. ಅದು ಸಾಲದೆಂಬಂತೆ ಅತ್ಯಂತ ಸನ್ನಡತೆಯ ಅನಿಲ್ ಕುಂಬ್ಳೆ ಯವರೊಂದಿಗೆ ತಕರಾರು ತೆಗೆದು ಅವರ ಮನಸ್ಸಿಗೆ ನೋವಾಗುವಂತೆ ಮಾಡಿದ್ದಾರೆ. ಇದರಿಂದ ಬೇಸರಗೊಂಡು ಕನ್ನಡಿಗ ಅನಿಲ್ ಕುಂಬ್ಳೆ ಕೋಚ್ ಸ್ಥಾನ ಕ್ಕೆ ರಾಜೀನಾಮೆ ನೀಡಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಹೋಗದೆ ಮರಳಿ ಭಾರತಕ್ಕೆ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin