ಟೀಮ್ ಇಂಡಿಯಾ ನಾಯಕತ್ವದಿಂದ ಹಿಂದೆ ಸರಿದ ಕೂಲ್ ಕ್ಯಾಪ್ಟನ್ ಧೋನಿ..!

ಈ ಸುದ್ದಿಯನ್ನು ಶೇರ್ ಮಾಡಿ

Dhoni

ನವದೆಹಲಿ. ಜ.04 : ಏಕದಿನ ಹಾಗೂ ಟಿ-20 ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವಕ್ಕೆ ವಿದಾಯ ಘೋಷಿಸುವ ಮೂಲಕ ಶಾಕ್ ನೀಡಿದ್ದಾರೆ. ಧೋನಿ ಈ ನಿರ್ಧಾರ ಸಾಮಾನ್ಯವಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಈ ಮೂಲಕ ಕೊಹ್ಲಿ ಹಾದಿ ಸುಗಮವಾಗಿದೆ. ಇಂದು ನಡೆದ  ಅಚ್ಚರಿಯ ಬೆಳವಣಿಗೆಯಲ್ಲಿ ಸೀಮಿತ ಓವರ್ ಫಾರ್ಮೆಟ್ ಕ್ರಿಕೆಟ್ ನಾಯಕ ಸ್ಥಾನಕ್ಕೆ ಧೋನಿ ವಿದಾಯ ಘೋಷಿಸಿ,  ನಾಯಕನಾಗಿ ನಾನು ಮುಂದುವರೆಯಲಾರೆ ಎಂದು ಬಿಸಿಸಿಐಗೆ ತಿಳಿಸಿದ್ದಾರೆ. ಆದರೆ, ಧೋನಿ ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ ಆಟಗಾರನಾಗಿ ಮುಂದುವರೆಯಲಿದ್ದಾರೆ. ಈ ಕುರಿತು ಟೀಮ್ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥರಿಗೆ ಧೋನಿ ತಿಳಿಸಿದ್ದಾರೆ.

ಭಾರತ ಕಂಡ ಶ್ರೇಷ್ಟ ನಾಯಕರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಹಾಗೂ ಟಿ-20 ವಿಶ್ವಕಪ್ ಗೆದ್ದು ಬೀಗಿತ್ತು.  ಈ ಹಿಂದೆಯೇ ಟೆಸ್ಟ್ ತಂಡದ ನಾಯಕನ ಸ್ಥಾನಕ್ಕೆ ಧೋನಿ ವಿದಾಯ ಹೇಳಿದ್ದರು. ಈಗ ಟಿ-20 ಹಾಗೂ ಏಕದಿನ ತಂಡದ ನಾಯಕತ್ವದಿಂದಲೂ ದೂರ ಉಳಿಯಲು ನಿರ್ಧರಿಸಿದ್ದಾರೆ.

ಭಾರತ ಕ್ರಿಕೆಟ್ ನ ಎಲ್ಲಾ ಫಾರ್ಮೆಟ್ ಗಳಲ್ಲಿ ನಾಯಕನಾಗಿ ಅದ್ಭುತ ಪ್ರದರ್ಶನ ನೀಡಿದ ಮಹೇಂದ್ರ ಸಿಂಗ್ ಧೋನಿಗೆ ಭಾರತದ ಕ್ರಿಕೆಟ್ ಅಭಿಮಾನಿಗಳ ಪರವಾಗಿ ಮತ್ತು ಬಿಸಿಸಿಐ ಪರವಾಗಿ ಧನ್ಯವಾದಗಳು ಎಂದು ಬಿಸಿಸಿಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಜೋರಿ ತಿಳಿಸಿದ್ದಾರೆ.

26, 2014 ರಂದು ಟೆಸ್ಟ್ ನಾಯಕತ್ವ ಸ್ಥಾನಕ್ಕೆ ನಿವೃತ್ತಿ ಘೋಷಿಸಿದ್ದರು. 2004 ಡಿಸೆಂಬರ್ 23 ರಂದು ಬಾಂಗ್ಲಾದೇಶದ ವಿರುದ್ಧದ ಒಂದು ದಿನದ ಅಂತರ ರಾಷ್ಟ್ರೀಯ ಪಂದ್ಯದಲ್ಲಿ ಮೊದಲ ಬಾರಿಗೆ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ಅವರು 2016ರ ಅಕ್ಟೋಬರ್ 23ರಂದು ನ್ಯೂಜಿಲ್ಯಾಂಡ್ ವಿರುದ್ಧ ಆಡಿದ್ದ ಪಂದ್ಯವೇ ನಾಯಕನಾಗಿ ಅವರ ವೃತ್ತಿ ಜೀವನದ ಕೊನೆಯ ಪಂದ್ಯವಾದಂತಾಗಿದೆ. ಧೋನಿ ನಾಯಕತ್ವದಲ್ಲಿ ಭಾರತ ತಂಡ 2011 ರ ಏಕದಿನದ ವಿಶ್ವ ಕಪ್, 2007ರ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು.

2007 ರಿಂದ 2016ರ ಅವಧಿಯಲ್ಲಿ ಧೋನಿ ನಾಯಕರಾಗಿ ಆಡಿದ 191 ಪಂದ್ಯಗಳಲ್ಲಿ ಭಾರತ ತಂಡವು 104 ಪಂದ್ಯಗಳಲ್ಲಿ ಜಯಿಸಿದ್ದು, 72 ಪಂದ್ಯಗಳಲ್ಲಿ ಪರಾಭವಗೊಂಡಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin