ಟೀಮ್ ಇಂಡಿಯಾ ವಿರುದ್ಧ ಟಿ20 ಸರಣಿಗೆ ಬ್ರಥ್ ವೈಟ್ ನಾಯಕ
ಸೈಂಟ್ ಜಾನ್ಸ್ , ಆ. 09 : ಈ ತಿಂಗಳ ಕೊನೆಯಲ್ಲಿ ಟಿ20 ಆರಂಭಗೊಳ್ಳಲಿರುವ ಪ್ರವಾಸಿ ಭಾರತ ತಂಡದ ವಿರುದ್ಧದ ಟಿ20 ಸರಣಿಗೆ ವೆಸ್ಟ್ ಇಂಡೀಸ್ ತಂಡದ ಟಿ20 ಸರಣಿಗೆ ಕಾರ್ಲೊಸ್ ಬ್ರಥ್ ವೈಟ್ ನಾಯಕಾಗಿ ಆಯ್ಕೆಯಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಮುಗಿದ ಬಳಿಕ ಎರಡು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಫೋರ್ಟ್ ಲಾರ್ಡರ್ ಡೇಲ್, ಫ್ಲೋರಿಡಾದಲ್ಲಿ ಟೀಂ ಇಂಡಿಯಾ ಆಡಲಿದೆ. ಆಗಸ್ಟ್ 27 ಹಾಗೂ 28ರಂದು ಪಂದ್ಯಗಳು ನಿಗದಿಯಾಗಿವೆ. ಡರೇನ್ ಸಾಮಿ ಅವರು ಟಿ20 ನಾಯಕತ್ವ ಕಳೆದುಕೊಂಡ ಬಳಿಕ ಬ್ರಥ್ ವೈಟ್ ಅವರು ನಾಯಕನ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ವಿಶ್ವ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆ ಓವರ್ ನಲ್ಲಿ ಬ್ರಥ್ ವೈಟ್ ನಾಲ್ಕು ಸಿಡಿಸುವ ಮೂಲಕ ಎಲ್ಲರ ಗಮನ ಸೆಳೆದರು. ಸುಮಾರು 6 ವರ್ಷಗಳ ಕಾಲ ವೆಸ್ಟ್ ಇಂಡೀಸ್ ತಂಡದ ನಾಯಕರಾಗಿದ್ದ ಸಾಮಿ ಅವರನ್ನು ಕಳೆದ ಶುಕ್ರವಾರದಂದು ಹುದ್ದೆಯಿಂದ ೆಳಗಿಳಿಸಲಾಯಿತು.
ವೆಸ್ಟ್ ಇಂಡೀಸ್ ಟಿ20 ತಂಡ:
ಆಂಡ್ರೆ ಫ್ಲೆಚರ್, ಆಂಡ್ರೆ ರಸೆಲ್, ಕಾರ್ಲೊಸ್ ಬ್ರಥ್ ವೈಟ್ (ನಾಯಕ), ಕ್ರಿಸ್ ಗೇಲ್, ಡ್ವಾಯ್ನೆ ಬ್ರಾವೊ, ಇವಿನ್ ಲೂಯಿಸ್, ಜಾಸನ್ ಹೋಲ್ಡರ್, ಜಾನ್ಸನ್ ಚಾರ್ಲ್ಸ್, ಕಿರಾನ್ ಪೊಲ್ಲಾರ್ಡ್, ಲೆಂಡ್ಲ್ ಸಿಮನ್ಸ್, ಮರ್ಲಾನ್ ಸ್ಯಾಮುಯಲ್ಸ್, ಸ್ಯಾಮುಯಲ್ ಬದ್ರಿ, ಸುನಿಲ್ ನರೇನ್