ಟೀ ಕುಡಿದು ಬಿಲ್ ಕೊಡದ ಕಾಂಗ್ರೆಸ್..!

ಈ ಸುದ್ದಿಯನ್ನು ಶೇರ್ ಮಾಡಿ

Tea-Bill

ಮುಂಬೈ,ಡಿ.22- ನೋಟ್ ಬ್ಯಾನ್ ಮಾಡಿದ್ದಕ್ಕೆ ಚಾಯ್ ವಾಲಾ ಮೋದಿ ವಿರುದ್ಧ ಭಾರೀ ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್ ಈಗ ಚಹಾ ಕುಡಿದು ಬಿಲ್ ಪಾವತಿ ಮಾಡದೇ ಇರುವ ವಿಚಾರ ಬೆಳಕಿಗೆ ಬಂದಿದೆ. ಮುಂಬೈನ ಅಜಾದ್ ಮೈದಾನದ ಸಮೀಪ ಇರುವ ಮಹಾರಾಷ್ಟ್ರ ಪ್ರದೇಶ್ ಕಾಂಗ್ರೆಸ್‍ ಕಮಿಟಿಯ ಕಚೇರಿಗೆ ಇಂದರ್ ಜೋಷಿ ಕಳೆದ ಹಲವು ವರ್ಷಗಳಿಂದ ಚಹಾವನ್ನು ಸರಬರಾಜು ಮಾಡಿಕೊಂಡು ಬಂದಿದ್ದಾರೆ. ಆದರೆ 2 ಲಕ್ಷ ರೂ. ಬಿಲ್ ಪಾವತಿಸದ್ದಕ್ಕೆ ಈಗ ಟೀ ಸರಬರಾಜು ಮಾಡುವುದನ್ನು ನಿಲ್ಲಿಸಿದ್ದಾರೆ.

ನನ್ನ ಕುಟುಂಬ ಹಲವು ದಶಕಗಳಿಂದ ಟೀ ವ್ಯಾಪಾರ ಮಾಡಿಕೊಂಡು ಬಂದಿದೆ. ಆದರೆ ಬಹಳ ದೀರ್ಘ ಸಮಯದಿಂದ ಕಾಂಗ್ರೆಸ್ ಬಿಲ್ ಪಾವತಿಯೇ ಮಾಡಿಲ್ಲ. ಈ ಕಾರಣಕ್ಕೆ ಅವರಿಗೆ ಟೀ ಮಾರಾಟ ಮಾಡುತ್ತಿಲ್ಲ ಎಂದು ಇಂದರ್ ಜೋಷಿ ಹೇಳಿದ್ದಾರೆ.  ಮಾರಾಟ ನಿಲ್ಲಿಸಿದ ಬಳಿಕವೂ ಟೀ ಬೇಕೆಂದು ಕಾಂಗ್ರೆಸ್ ಕೇಳಿದ್ದಕ್ಕೆ, ಪ್ಲೀಸ್ ಮೊದಲು ಹಣವನ್ನು ಪಾವತಿಸಿ ಎಂದು ಇಂದರï ಜೋಷಿ ಉತ್ತರಿಸಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರುಪಮ್ ಈ ಬಗ್ಗೆ ಪ್ರತಿಕ್ರಿಯಿಸಿ, ಕೆಲ ವಾರದ ಹಿಂದೆ ಹಣವನ್ನು ಪಾವತಿ ಮಾಡದೇ ಇರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ನಮ್ಮ ಕಚೇರಿ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಬಿಲ್ ಬಾಕಿ ಆಗಿದೆ. 4 ತಿಂಗಳಿನಿಂದ ಬಿಲï ಪಾವತಿ ಆಗಿಲ್ಲ. 4 ಲಕ್ಷದಲ್ಲಿ ಈಗಾಗಲೇ 2 ಲಕ್ಷ ರೂ.ಗಳನ್ನು ಪಾವತಿಸಿದ್ದೇವೆ ಎಂದು ಹೇಳಿದರು.

ನಮ್ಮ ಕಚೇರಿಯಲ್ಲಿ ಟೀ ಯಂತ್ರವಿದೆ. ಆದರೆ ನಾನು ಇಂದರ್ ಜೋಷಿ ಟೀ ಅಭಿಮಾನಿ. ಅಷ್ಟೇ ಅಲ್ಲದೇ ಹಲವು ಮಂದಿಗೆ ಇಷ್ಟವಾದ ಹಿನ್ನೆಲೆಯಲ್ಲಿ ನಾವು ಸಭೆಗೆ ಟೀ ತರಿಸಿಕೊಳ್ಳುತ್ತಿದ್ದೇವು ಎಂದು ತಿಳಿಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin