ಟೆಕ್ಕಿ ನಂದಿನಿ ಹಲ್ಲೆ ಪ್ರಕರಣ ತಿರುಚಿಲ್ಲ: ರಾಮಲಿಂಗಾರೆಡ್ಡಿ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

Ramalingareddy--01ಬೆಂಗಳೂರು, ಅ.19- ಪ್ರಾಣಿಪ್ರಿಯೆ ಟೆಕ್ಕಿ ನಂದಿನಿ ಅಪಘಾತ ಪ್ರಕರಣವನ್ನು ಪೋಲಿಸರು ತಿರುಚುವ ಪ್ರಯತ್ನಕ್ಕೆ ಕೈ ಹಾಕಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಸ್ಪಷ್ಟಪಡಿಸಿದರು. ಈಜಿಪುರ ಸಿಲಿಂಡರ್ ಸ್ಪೋಟ ಪ್ರಕರಣದಲ್ಲಿ ಗಾಯಗೊಂಡು ವಿಕ್ಟೋರಿಯಾ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಜನಾ ಮತ್ತಿತರ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಟೆಕ್ಕಿ ನಂದಿನಿ ಚಲಾಯಿಸುತ್ತಿದ್ದ ಕಾರು ಆಟೋವೊಂದಕ್ಕೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ಸಾರ್ವಜನಿಕರು ನಂದಿನಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣವನ್ನು ತಿರುಚಲು ಪೋಲಿಸರು ಪ್ರಯತ್ನಿಸಿಲ್ಲ ಎಂದು ರೆಡ್ಡಿ ಸ್ಪಷ್ಟಪಡಿಸಿದರು.

ಕಸಾಯಿಖಾನೆ ಮುಚ್ಚುವ ಕುರಿತಂತೆ ಹೈಕೋರ್ಟ್ ಕಮಿಷನರೇಟ್ ನೇಮಕ ಮಾಡಿದೆ. ಆ ಕಮಿಷನ್ ವರದಿ ನೀಡುವವರೆಗೂ ಕಸಾಯಿಖಾನೆಗಳಿಗೆ ಪೋಲಿಸರ ಭದ್ರತೆ ಒದಗಿಸಲಾಗುವುದು ಎಂದರು. ಈಜಿಪುರ ಘಟನೆಯಲ್ಲಿ  ಸಾವು ಗೆದ್ದು ಬಂದ ಸಂಜನಾ ಹಾಗೂ ವಿದ್ಯಾರ್ಥಿ ದೀಪಕ್ ಮತ್ತು ಜಾನಕಿ ಎಂಬುವರು ಚೇತರಿಸಿಕೊಳ್ಳುತ್ತಿದ್ದು, ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು. ಸಂಜನಾಳಿಗೆ ಶೇ.60ರಷ್ಟು ಸುಟ್ಟ ಗಾಯಗಳಾಗಿದ್ದು, ಅಪಘಾತ ನಡೆದ ಸಂದರ್ಭದಲ್ಲಿ ನೀರು ಹಿಡಿಯಲು ಬಂದು ಗಾಯಗೊಂಡಿರುವ ದೀಪಕ್‍ಗೆ ಶೇ.15ರಷ್ಟು ಹಾಗೂ ಜಾನಕಿಗೆ ಶೇ.25ರಷ್ಟು ಸುಟ್ಟ ಗಾಯಗಳಾಗಿವೆ.  ಎಲ್ಲರೂ ಚೇತರಿಸಿಕೊಳ್ಳುತ್ತಿದ್ದು, ಆದಷ್ಟು ಬೇಗ ಗುಣಮುಖರಾಗಲಿದ್ದಾರೆ ಎಂದು ಅವರು ವಿವರಿಸಿದರು. ಮೇಯರ್ ಸಂಪತ್‍ರಾಜ್ ಮತ್ತಿತರರು ಜತೆಯಲ್ಲಿದ್ದರು.

Facebook Comments

Sri Raghav

Admin