ಟೆನಿಸ್ ಸೆಮಿಫೈನಲ್‍ನಲ್ಲಿ ಸಾನಿಯಾ-ಬೋಪಣ್ಣಗೆ ಸೋಲು

ಈ ಸುದ್ದಿಯನ್ನು ಶೇರ್ ಮಾಡಿ

Saniya

ರಿಯೋ ಡಿ ಜನೈರೋ, ಆ.14- ರಿಯೋ ಒಲಿಂಪಿಕ್ಸ್‍ನಲ್ಲಿ ಫೈನಲ್ ಪ್ರವೇಶಿಸುವ ಭಾರತದ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿಯ ಆಸೆ ಕಮರಿ ಹೋಗಿದೆ. ನಿನ್ನೆ ರಾತ್ರಿ ಇಲ್ಲಿ ನಡೆದ ಮಿಶ್ರ ಡಬಲ್ಸ್ ಟೆನಿಸ್ ಸೆಮಿಫೈನಲ್‍ನಲ್ಲಿ ಈ ಜೋಡಿಯನ್ನು ಅಮೆರಿಕದ ವೀನಸ್ ವಿಲಿಯಮ್ಸ್ ಮತ್ತು ರಾಜೀವ್ ರಾಮ್ ಮಣಿಸಿದರು. ಆದಾಗ್ಯೂ ಕಂಚು ಪದಕ ಗೆಲ್ಲಲು ಈ ಜೊಡಿಗೆ ಅವಕಾಶ ಲಭಿಸಿದೆ.  ರಿಯೋ ಡಿ ಜನೈರೋದ ಒಲಿಂಪಿಕ್ ಟೆನಿಸ್ ಸೆಂಟರ್‍ನಲ್ಲಿ ನಡೆದ ಒಂದು ಗಂಟೆ 17 ನಿಮಿಷಗಳ ಹಣಾಹಣಿಯಲ್ಲಿ ಅಮೆರಿಕ ಜೋಡಿ, ಸಾನಿಯಾ-ಬೋಪಣ್ಣ ಅವರನ್ನು 6-2, 2-6, 3-10 ಸೆಟ್‍ಗಳಿಂದ ಪರಾಭವಗೊಳಿಸಿತು.

ಕ್ವಾರ್ಟರ್ ಫೈನಲ್‍ನಲ್ಲಿ ಆಸ್ಟ್ರೇಲಿಯಾ ಜೋಡಿಯನ್ನು ಸುಲಭವಾಗಿ ಸೋಲಿಸಿ ಉಪಾಂತ್ಯ ತಲುಪಿದ ಸಾನಿಯಾ-ಬೋಪಣ್ಣ ತೀವ್ರ ಪೈಪೆÇೀಟಿ ಎದುರಿಸಿ ಪರಾಭವಗೊಂಡರು. ಆದರೂ ಕಂಚು ಪದಕ ಪಡೆಯುವ ಅವಕಾಶ ಗಿಟ್ಟಿಸಿರುವುದು ಸಂತಸದ ವಿಚಾರವಾಗಿದೆ.  ಒಲಿಂಪಿಕ್ಸ್ ಟೆನಿಸ್‍ನಲ್ಲಿ ಭಾರತ ಗೆದ್ದಿರುವುದು ಒಂದು ಪದಕ ಮಾತ್ರ. 1996ರ ಅಟ್ಲಾಂಟಾ ಒಲಿಂಪಿಕ್ಸ್ ಪುರುಷರ ಸಿಂಗಲ್ಸ್‍ನಲ್ಲಿ ಲಿಯಾಂಡರ್ ಪೇಸ್ ಕಂಚು ಜಯಿಸಿದ್ದರು. ಕಳೆದ 20 ವರ್ಷಗಳಿಂದ ಕಾಡುತ್ತಿದ್ದ ಪದಕದ ಕೊರಗನ್ನು ನೀಗಿಸಲು ಕರ್ನಾಟಕದ ಬೋಪಣ್ಣ ಮತ್ತು ಹೈದರಾಬಾದ್‍ನ ಸಾನಿಯಾ ಕಂಚು ಪದಕ ಗೆಲ್ಲುವ ಅವಕಾಶ ಲಭಿಸಿರುವುದು ಭಾರತಕ್ಕೆ ಹೆಮ್ಮೆಯ ಸಂಗತಿ.

► Follow us on –  Facebook / Twitter  / Google+

Facebook Comments

Sri Raghav

Admin