ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಕ್ರಾಂತಿ : ರೂ.50ಕ್ಕೆ 1 ಜಿಬಿ ಡಾಟಾ, ಫ್ರೀ ವಾಯ್ಸ್ ಕಾಲ್

ಈ ಸುದ್ದಿಯನ್ನು ಶೇರ್ ಮಾಡಿ

Freee

ಮುಂಬೈ ಸೆ.01 : ಟೆಲಿಕಾಂ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಗೆ ಮುಂದಾಗಿರುವ ರಿಲಯನ್ಸ್ ಈಗ ತನ್ನ ಜಿಯೋ ನೆಟ್ ವರ್ಕ್ ನಿಂದ ಮಾಡುವ ಎಲ್ಲಾ ಕರೆಗಳೂ ಉಚಿತವಾಗಿರಲಿದೆ ಎಂದು ಘೋಷಿಸಿದೆ. ಉಚಿತ ಕರೆ, ರೋಮಿಂಗ್ ಶುಲ್ಕ ಮುಕ್ತ ಸೇವೆ ಹಾಗೂ ಪ್ರತಿ ಜಿಬಿ ಡೇಟಾಗೆ ರೂ.50 ದರ ಘೋಷಿಸುವ ಮೂಲಕ ರಿಲಯನ್ಸ್ ಜಿಯೊ ಟೆಲಿಕಾಂ ಕ್ಷೇತ್ರದಲ್ಲಿ ದರ ಸಮರಕ್ಕೆ ಮುಂದಾಗಿದೆ. ಮುಂಬೈ ನಲ್ಲಿ ನಡೆದ ರಿಲಯನ್ಸ್ ನ 42 ನೇ ಷೇರುದಾರರ ಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಜಿಯೊ ಸೇವೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಮುಖೇಶ್ ಅಂಬಾನಿ, ರಿಲಯನ್ಸ್ ಜಿಯೋ ನೆಟ್ವರ್ಕ್ ಮೂಲಕ ಯಾವುದೇ ನೆಟ್ವರ್ಕ್ ಗೆ ಮಾಡುವ ಕರೆಗಳು ಸಂಪೂರ್ಣ ಉಚಿತವಾಗಿರಲಿದ್ದು ರೋಮಿಂಗ್ ದರ ಇರುವುದಿಲ್ಲ ಎಂದು ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ ಈಗ ಬೇರೆ ನೆಟ್ವರ್ಕ್ ಗಳಂತೆ ದೀಪಾವಳಿ, ಹೊಸ ವರ್ಷದ ದಿನಗಳಂದು ಮೆಸೇಜ್ ಗಳಿಗೆ ಶುಲ್ಕ ವಿಧಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಜಿಯೋ ನೆಟ್ವರ್ಕ್ ಮೂಲಕ ಮತ್ತಷ್ಟು ಜನಪ್ರಿಯ ಸೇವೆಗಳನ್ನು ಒದಗಿಸಿರುವ ಮುಖೇಶ್ ಅಂಬಾನಿ, ಈಗ ಭಾರತೀಯರು ಡಾಟಾಗಿರಿ ಮಾಡಬಹುದು ಎಂದಿದ್ದಾರೆ.

ಜಿಯೋ ನೆಟ್ವರ್ಕ್ ಮೂಲಕ ಹೆಚ್ಚು ಡಾಟಾ ಬಳಸಿದಷ್ಟೂ ದರ ಕಡಿಮೆಯಾಗಲಿದೆ. ಡಾಟಾ ಕೊರತೆಯಿಂದ ಭಾರತವನ್ನು ಸಮೃದ್ಧ ಡಾಟಾ ಬಳಕೆಯತ್ತ ಕೊಂಡೊಯ್ಯುವುದು ರಿಲಯನ್ಸ್ ಜಿಯೋ ನೆಟ್ವರ್ಕ್ ನ ಪ್ರಮುಖ ಉದ್ದೇಶವಾಗಿದೆ. ಜಿಯೋ ನೆಟ್ವರ್ಕ್ ಭಾರತವನ್ನು ವಿಧ್ವದಲ್ಲೇ ಕಡಿಮೆ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಡಾಟಾ ಮಾರುಕಟ್ಟೆಯನ್ನಾಗಿ ಮಾಡಲಿದೆ ಎಂದು ಅಂಬಾನಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾಗೆ ರಿಲಯನ್ಸ್ ಜಿಯೋ ನೆಟ್ವರ್ಕ್ ಸೇವೆಯನ್ನು ಅರ್ಪಿಸುತ್ತಿದ್ದೇವೆ, ಜಿಯೋ ಸೇವೆ ರಿಲಯನ್ಸ್ ನ ಅತಿ ದೊಡ್ಡ ಬಂಡವಾಳ ಹೂಡಿಕೆಯಾಗಿದೆ ಎಂದಿರುವ ಅಂಬಾನಿ ವಿಶ್ವವೇ ಹೊಸ ಯುಗದತ್ತ ಸಾಗುತ್ತಿರಬೇಕಾದರೆ ಭಾರತೀಯರು ಹಿಂದೆ ಉಳಿಯುವಂತಿಲ್ಲ, ಯುವಕರಿಗೆ ಸರಿಯಾದ ವಾತಾವರಣ ನೀಡಿ ಅವರು ನಮ್ಮನ್ನು ಬೆರಗುಗೊಳಿಸುತ್ತಾರೆ ಎಂದು ಹೇಳಿದ್ದಾರೆ.

ಜಿಯೊ ವಿಶೇಷತೆಗಳು :

ಸೆಪ್ಟೆಂಬರ್ 5ರಿಂದ ಮಾರುಕಟ್ಟೆಗೆ
ದೇಶದಾದ್ಯಂತ ಉಚಿತ ಕರೆ
ಪ್ರತಿ ಜಿಬಿ ಡಾಟಾಗೆ ರೂ. 50
ಆರಂಭಿಕ ಕೊಡುಗೆಯಾಗಿ ಡಿಸೆಂಬರ್ 31ರವರೆಗೆ ಎಲ್ಲಾ ಸೇವೆಗಳು ಉಚಿತ
ರೂ. 149ಕ್ಕೆ ಬೇಸಿಕ್ ಪ್ಲಾನ್
ಜಿಯೊಫೈ ರೂಟರ್ ಬೆಲೆ ರೂ.1,999
ಹೊಸ ಲೈಫ್ ಡಿವೈಸ್ ಆರಂಭಿಕ ಬೆಲೆ ರೂ. 2,999
ಭಾರತದ ವಿವಿಧೆಡೆ 10 ಲಕ್ಷಕ್ಕೂ ಹೆಚ್ಚು ವೈಫೈ ಹಾಟ್ಸ್ಪಾಟ್

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin