ಟೆಲಿವಿಷನ್ ಗೋಪುರಕ್ಕೆ ಅಪ್ಪಳಿಸಿ ಹೆಲಿಕಾಪ್ಟರ್ ಪತನ, ಏಳು ಮಂದಿ ದುರ್ಮರಣ
ಇಸ್ತಾನ್ಬುಲ್ (ಟರ್ಕಿ), ಮಾ.11-ಟೆಲಿವಿಷನ್ ಗೋಪುರಕ್ಕೆ ಹೆಲಿಕಾಪ್ಟರ್ ಅಪ್ಪಳಿಸಿದ ಹೆಲಿಕಾಪ್ಟರ್ ನಂತರ ಹೆದ್ದಾರಿಯಲ್ಲಿ ಪತನಗೊಂಡು ಐವರು ಪ್ರಯಾಣಿಕರೂ ಸೇರಿದಂತೆ ಏಳು ಮಂದಿ ಸಾವಿಗೀಡಾದ ದುರಂತ ಟರ್ಕಿ ರಾಜಧಾನಿ ಇಸ್ತಾನ್ಬುಲ್ ವಿಮಾನನಿಲ್ದಾಣದ ಬಳಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಟರ್ಕಿಯ ಪ್ರತಿಷ್ಠಿತ ಉದ್ಯಮ ಸಂಸ್ಥೆ ಎಕ್ಸಾಬೈಕಾಸಿ ಗ್ರೂಪ್ನ ಉನ್ನತಾಧಿಕಾರಿ ಮತ್ತು ರಷ್ಯಾದ ನಾಲ್ವರು ಅಧಿಕಾರಿಗಳು ಮತ್ತು ಇಬ್ಬರು ಪೈಲೆಟ್ಗಳು ಮೃತಪಟ್ಟಿದ್ದಾರೆ. ಇಸ್ತಾನ್ಬುಲ್ನ ಅಟಾಟರ್ಕ್ ಏರ್ಪೋರ್ಟ್ನಿಂದ ಮೇಲೇರಿದ ಕೆಲವೇ ನಿಮಿಷಗಳಲ್ಲಿ ಹೆಲಿಕಾಪ್ಟರ್ ಹೆದ್ದಾರಿಯಲ್ಲಿ ಪತನಗೊಂಡಿತು. ಈ ದುರಂತದಲ್ಲಿ ಸಂಸ್ಥೆಯ ರಷ್ಯಾ ವಿಭಾಗದ ಮುಖ್ಯಸ್ಥ ಕೂಡ ಸಾವನ್ನಪ್ಪಿದ್ದಾರೆ.
ಟೆಲಿವಿಷನ್ ಗೋಪುರಕ್ಕೆ ಅಪ್ಪಳಿಸಿ ನಂತರ ಹೆಲಿಕಾಪ್ಟರ್ ಪತನಗೊಂಡಿತು ಎಂದು ವಾರ್ತಾವಾಹಿನಿಗಳು ಸುದ್ದಿ ಬಿತ್ತರಿಸಿವೆ. ಔಷಧಿಗಳು, ಗೃಹೋಪಯೋಗಿ ವಸ್ತುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿಯ ಅಧ್ಯಕ್ಷ ಬುಲೆಂಟ್ ಎಕ್ಸಾಬೈಕಾಸಿ, ಹೆಲಿಕಾಪ್ಟರ್ ಪತನದಲ್ಲಿ ತಮ್ಮ ಸಂಸ್ಥೆಯ ಉನ್ನತಾಧಿಕಾರಿಗಳು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS