ಟೆಸ್ಟ್ ನಲ್ಲಿ ನಂ.1 ಪಟ್ಟಕ್ಕೇರಿದ ಟೀಂ ಇಂಡಿಯಾ

ಈ ಸುದ್ದಿಯನ್ನು ಶೇರ್ ಮಾಡಿ

Kohli

ಕೊಲಂಬೋ, ಆ.17-ಶ್ರೀಲಂಕಾ ವಿರುದ್ಧ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ 160 ರನ್ಗಳಿಂದ ಹೀನಾಯ ಸೋಲು ಕಂಡಿರುವ ಆಸ್ಟ್ರೇಲಿಯಾ ತಂಡವು ಟೆಸ್ಟ್ ರ್ಯಾಂ ಕಿಂಗ್ನಲ್ಲಿ ನಂ.1 ಸ್ಥಾನದ ಪಟ್ಟವನ್ನು ಕಳೆದುಕೊಂಡಿದೆ.  ಶ್ರೀಲಂಕಾ ವಿರುದ್ಧ ನಡೆದ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು 3-0 ವೈಟ್ವಾಶ್ ಕಂಡ ಸ್ಟೀವನ್ಸ್ಮಿತ್ ನಾಯಕತ್ವದ ಆಸ್ಟ್ರೇಲಿಯಾ ಈಗ 3ನೆ ಸ್ಥಾನಕ್ಕೆ ಕುಸಿದಿದೆ.

ನಂಬರ್ 1 ಪಟ್ಟಕ್ಕಾಗಿ ಭಾರತ- ಪಾಕಿಸ್ತಾನ ಪೈಪೋಟಿ:
ಟೆಸ್ಟ್ ರ್ಯಾಂ ಕಿಂಗ್ನಲ್ಲಿ ನಂಬರ್ 1 ಸ್ಥಾನ ಕಳೆದುಕೊಂಡಿರುವ ಆಸ್ಟ್ರೇಲಿಯಾ ಈಗ 3ನೆ ಸ್ಥಾನಕ್ಕೆ ಕುಸಿದಿದ್ದರೆ ನಂಬರ್ 1 ಪಟ್ಟಕ್ಕಾಗಿ ಕ್ರಿಕೆಟ್ ಜಗತ್ತಿನ ಸಂಪ್ರದಾಯಿಕ ವೈರಿಗಳೆಂದೇ ಗುರುತಿಸಿಕೊಂಡಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಡಿಸಿದೆ. ಪ್ರಸ್ತುತ ಭಾರತ ನಂಬರ್1 ಪಟ್ಟವನ್ನು ಆಲಂಕರಿಸಿದ್ದು ನಾಳೆಯಿಂದ ವೆಸ್ಟ್ಇಂಡೀಸ್ ವಿರುದ್ಧ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಡ್ರಾ ಹಾಗೂ ಸೋಲು ಕಂಡರೆ ಅಂಕಗಳ ಆಧಾರದ ಮೇಲೆ ಪಾಕಿಸ್ತಾನ ನಂಬರ್ 1 ಸ್ಥಾನಕ್ಕೇರಲಿದೆ.  ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ 4 ಟೆಸ್ಟ್ ಪಂದ್ಯಗಳ ಸರಣಿಯನ್ನು 2-2 ರಿಂದ ಸಮಬಲ ಸಾಧಿಸಿದ ಪಾಕಿಸ್ತಾನ ಪ್ರಸ್ತುತ 111 ಅಂಕಗಳನ್ನು ಗಳಿಸಿದೆ. ಭಾರತ 112 ಅಂಕಗಳನ್ನು ಹೊಂದಿದ್ದು ವೆಸ್ಟ್ಇಂಡೀಸ್ ವಿರುದ್ಧ ಅಂತಿಮ ಪಂದ್ಯದ ಫಲಿತಾಂಶ ಟೆಸ್ಟ್ ರ್ಯಾಂ ಕಿಂಗ್ನ ಭವಿಷ್ಯವನ್ನೇ ಬದಲಿಸಲಿದೆ.  ಆಸ್ಟ್ರೇಲಿಯಾ ವಿರುದ್ಧ ವೈಟ್ವಾಶ್ ಸಾಧಿಸಿರುವ ಶ್ರೀಲಂಕಾ 6ನೆ ಸ್ಥಾನಕ್ಕೇರಿದರೆ, ದಕ್ಷಿಣ ಆಫ್ರಿಕಾ 7ನೆ ಸ್ಥಾನಕ್ಕೆ ಕುಸಿದಿದೆ.
ಐಸಿಸಿ ಟೆಸ್ಟ್ ರ್ಯಾಂ ಕಿಂಗ್:
1. ಭಾರತ (112 ಪಾಯಿಂಟ್ಸ್), 2.ಪಾಕಿಸ್ತಾನ (111ಪಾಯಿಂಟ್ಸ್), 3. ಆಸ್ಟ್ರೇಲಿಯಾ (108), 4. ಇಂಗ್ಲೆಂಡ್ (108), 5. ನ್ಯೂಜಿಲ್ಯಾಂಡ್ (99), 6. ಶ್ರೀಲಂಕಾ (95), 7. ದಕ್ಷಿಣ ಆಫ್ರಿಕಾ (92), 8. ವೆಸ್ಟ್ಇಂಡೀಸ್, 9. ಬಾಂಗ್ಲಾದೇಶ (57), 10, ಜಿಂಬಾಬ್ವೆ (8).

Facebook Comments

Sri Raghav

Admin